ADVERTISEMENT

ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆಗೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 4:38 IST
Last Updated 14 ಜುಲೈ 2021, 4:38 IST
ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಭತ್ತ ನಾಟಿ ಪ್ರಾತ್ಯಕ್ಷಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್‌ ಕುಮಾರ್ ಕಟೀಲ್‌ ಮಂಗಳವಾರ ಚಾಲನೆ ನೀಡಿದರು. ಶಾಸಕ ರಾಜೇಶ್‌ ನಾಯ್ಕ್ ಇದ್ದಾರೆ
ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಭತ್ತ ನಾಟಿ ಪ್ರಾತ್ಯಕ್ಷಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್‌ ಕುಮಾರ್ ಕಟೀಲ್‌ ಮಂಗಳವಾರ ಚಾಲನೆ ನೀಡಿದರು. ಶಾಸಕ ರಾಜೇಶ್‌ ನಾಯ್ಕ್ ಇದ್ದಾರೆ   

ಬಂಟ್ವಾಳ: ಇಲ್ಲಿನ ಕೃಷಿ ಇಲಾಖೆ ಮತ್ತು ಬಂಟ್ವಾಳ ಕೃಷಿಕ ಸಮಾಜದ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಾಗಾರಕ್ಕೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಚಾಲನೆ ನೀಡಿದರು.

ದೇವಸ್ಥಾನದ ಎದುರು 2 ಎಕರೆ ವಿಸ್ತೀರ್ಣದಲ್ಲಿ ನೇಜಿ ನಾಟಿ ನಡೆಯುತ್ತಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ತಿಳಿಸಿದರು.

ಇದೇ ವೇಳೆ ಕೃಷಿ ಸಂಜೀವಿನಿ, ರೋಟರಿ ಟಿಲ್ಲರ್ ಪ್ರದರ್ಶನ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಶುಭ ಹಾರೈಸಿದರು.

ADVERTISEMENT


ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ತಹಶೀಲ್ದಾರ್ ರಶ್ಮಿ ಎಸ್.ಆರ್., ಸಹಾಯಕ ಕೃಷಿ ನಿರ್ದೇಶಕ ಚೆನ್ನಕೇಶವಮೂರ್ತಿ, ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ, ಸಹಾಯಕ ಅಧಿಕಾರಿ ಕೊರಗಪ್ಪ, ಹನುಮಂತ ಕಲ್ಗಿ, ಕೃಷಿಕ ಸಮಾಜ ಅಧ್ಯಕ್ಷ ಎಂ.ಪದ್ಮರಾಜ್ ಬಲ್ಲಾಳ್ ಮಾವಂತೂರು, ರಾಜ್ಯ ಪ್ರತಿನಿಧಿ ಕೆ.ಪದ್ಮನಾಭ ರೈ, ಸದಸ್ಯರಾದ ಗಣೇಶ್ ಶೆಟ್ಟಿ, ಎಸ್.ಹೊಳ್ಳ, ಪೊಳಲಿ ಸಿಎ ಬ್ಯಾಂಕ್ ಉಪಾಧ್ಯಕ್ಷ ವೆಂಕಟೇಶ್ ನಾವಡ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಿಶೋರ್ ಪೊಳಲಿ, ಚಂದ್ರಾವತಿ, ಪಿಡಿಒ ನಯನ ಇದ್ದರು.

ಸಂಸದ ನಳಿನ್ ಕುಮಾರ್ ಯಾಂತ್ರೀಕೃತ ನೇಜಿ ನಾಟಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.