ADVERTISEMENT

ಗುರುಪುರ: ಆ.27ರಂದು ಮೊಸರು ಕುಡಿಕೆ ಉತ್ಸವ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 13:44 IST
Last Updated 25 ಆಗಸ್ಟ್ 2024, 13:44 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಬಜಪೆ: ಗುರುಪುರ ಶ್ರೀಕೃಷ್ಣ ಮಿತ್ರ ಮಂಡಳಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 56ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಆ.27ರಂದು ನಡೆಯಲಿದೆ.

‌ಬೆಳಿಗ್ಗೆ ಗಣಪತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮಧ್ಯಾಹ್ನ 12ರಿಂದ ಅಡಿಕೆ ಮರ ಹತ್ತುವ ಸ್ಪರ್ಧೆ, 1.30ರಿಂದ ಮುದ್ದು ಕೃಷ್ಣ ಸ್ಪರ್ಧೆ, ಸಂಜೆ 6ಕ್ಕೆ ಮರವಣಿಗೆ ನಡೆಯಲಿದೆ.

ADVERTISEMENT

ಸಂಜೆ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗುರುಪುರ ಜಂಗಮ ಮಠ ಮತ್ತು ವಜ್ರದೇಹಿ ಮಠದ ಸ್ವಾಮೀಜಿಗಳು ಆಶೀರ್ವಚನ ನೀಡುವರು. ಉದ್ಯಮಿ ಮಧುಸೂದನ ಪೈ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಾ.ಭರತ್ ಶೆಟ್ಟಿ, ಉದ್ಯಮಿಗಳಾದ ಗುರುಪುರ ರಾಜಾರಾಮ ಶೆಣೈ, ಸಚಿನ್ ಕೆ.ಶೆಟ್ಟಿ ಬೋಂದೆಲ್, ಲಕ್ಷ್ಮಣ್ ಶೆಟ್ಟಿಗಾರ ಗುರುಪುರ, ರಾಜೇಶ ಆರೋರ, ನಿತೇಶ್ ಕಾಂಜಿಲಕೋಡಿ, ಜಯರಾಜ ಭಂಡಾರಿ ಗುರುಪುರ ಭಾಗವಹಿಸುವರು ಮಂಡಳಿ ಅಧ್ಯಕ್ಷ ಯತೀಶ್ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.