ADVERTISEMENT

SSLC Result 2024 | ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ‌ ಜಿಗಿದ ದಕ್ಷಿಣ ಕನ್ನಡ

ಜಿಲ್ಲೆಗೆ ಶೇ 92.12 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಮೇ 2024, 6:13 IST
Last Updated 9 ಮೇ 2024, 6:13 IST
<div class="paragraphs"><p>ಪ್ರಾತಿನಿಧೀಕ ಚಿತ್ರ</p></div>

ಪ್ರಾತಿನಿಧೀಕ ಚಿತ್ರ

   

ಮಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ‌‌ ಜಿಗಿದಿದೆ.

ಜಿಲ್ಲೆಯ ಒಟ್ಟು ಫಲಿತಾಂಶ ಶೇ 92.12ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 29,701 ವಿದ್ಯಾರ್ಥಿಗಳಲ್ಲಿ 27,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ADVERTISEMENT

ಕಳೆದ ವರ್ಷ ಜಿಲ್ಲೆಯ ಒಟ್ಟು ಫಲಿತಾಂಶ ‌ ಶೇ 89.47 ಆಗಿದ್ದು, ರಾಜ್ಯದಲ್ಲಿ 17ನೇ ಸ್ಥಾನದಲ್ಲಿತ್ತು. 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ 20ನೇ ಸ್ಥಾನದಲ್ಲಿತ್ತು.

ದ್ವಿತೀಯ ‌ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಜಿಲ್ಲೆಯಲ್ಲಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರತಿ ಬಾರಿ ಕುಸಿತವಾಗುತ್ತಿದೆ ಎಂಬ ಸಾರ್ವತ್ರಿಕ ಆರೋಪ ಇತ್ತು. ಈ ಬಾರಿ ಈ ಆರೋಪದಿಂದ ಜಿಲ್ಲೆ ಮುಕ್ತವಾಗಿದೆ.

'ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ನಿರಂತರ ಪ್ರಯತ್ನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಆರಂಭದಲ್ಲೇ ತರಬೇತಿ ನೀಡಿರುವುದು, ವಿಷಯ ಪರಿಣಿತ ಶಿಕ್ಷಕರು ಗರಿಷ್ಠ ಅಂಕ ಗಳಿಕೆಗೆ ಸಲಹೆ, ಮಾರ್ಗದರ್ಶನ ಮಾಡಿರುವುದು ಪರೀಕ್ಷಾ ಫಲಿತಾಂಶದಲ್ಲಿ ಪ್ರತಿಫಲನಗೊಂಡಿದೆ. ಈ ಬಾರಿ ಪರೀಕ್ಷೆಯಲ್ಲಿ ವೆಬ್ ಕಾಸ್ಟಿಂಗ್ ಪ್ರಯೋಗ ಮಾಡಲಾಗಿತ್ತು. ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಬರೆದಿದ್ದರು' ಎಂದು ಡಿಡಿಪಿಐ ವೆಂಕಟೇಶ ಪಟಗಾರ್ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.