ಮಂಗಳೂರು: ಹನಿಜೆನಿಕ್ಸ್ ಬೀ ಫಾರ್ಮ್ಸ್ ಮತ್ತು ಆರ್‌ಒ ಇಂಟರ್ ನ್ಯಾಷನಲ್ ಮಂಗಳೂರು ವತಿಯಿಂದ ‘ಕುಡ್ಲ ಪೆಲಕಾಯಿ ಪರ್ಬ’ವನ್ನು ನಗರದ ಬೆಂದೂರ್‌ವೆಲ್‌ನ ಸೇಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ಜೂ.21 ಮತ್ತು 22ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕ ಅಶ್ವಿನ್ ಸಿಕ್ವೇರಾ ಹೇಳಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಜೂ.21ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಹಲಸಿನ ಹಣ್ಣಿನ ಖಾದ್ಯಗಳು, ಹಲಸು, ಮಾವು, ಅವಕಾಡೊ, ಡ್ರಾಗನ್‌ಫ್ರೂಟ್, ರಂಬುಟಾನ್, ಮ್ಯಾಂಗೊಸ್ಟೀನ್ ಹಣ್ಣುಗಳು ಮೇಳದಲ್ಲಿ ಇರಲಿವೆ. ರೈತ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಲಾಗುತ್ತಿದೆ. ಸಾವಯವ ಉತ್ಪನ್ನಗಳು, ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶ’ ಎಂದರು. ಸಂಪರ್ಕ ಸಂಖ್ಯೆ: 91646 09688 (ಅಶ್ವಿನ್ ಸಿಕ್ವೇರಾ).
ಸಹಾಯಕ ಸಂಯೋಜಕ ಶ್ರೀಕಾಂತ್ ಪೈ, ಜಾಕ್ಸನ್ ಸಲ್ಡಾನ, ವೀವನ್ ಪಿಂಟೊ, ಭಾಸ್ಕರ್ ರೈ ಕಟ್ಟ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.