ADVERTISEMENT

ಕುಕ್ಕೆ: ಅಧಿಕ ಭಕ್ತ ಸಂದಣಿ; 135 ದಾಖಲೆಯ ತುಲಾಭಾರ ಸೇವೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 16:25 IST
Last Updated 23 ಡಿಸೆಂಬರ್ 2018, 16:25 IST

ಸುಬ್ರಹ್ಮಣ್ಯ: ಸರಣಿ ರಜೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದರ್ಶನಕ್ಕೆ ಭಾನುವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಶ್ರೀ ಕ್ಷೇತ್ರದಲ್ಲಿ ದಾಖಲೆಯ 135 ತುಲಾಭಾರ ಸೇವೆ ನೆರವೇರಿದೆ.

ಹಿಂದೆ ಅತೀ ಹೆಚ್ಚು ಎಂದರೆ 122 ಮಂದಿ, 2017ರಲ್ಲಿ 118 ಸೇವೆ ನೆರವೇರಿತ್ತು. ಭಾನುವಾರ ಆಶ್ಲೇಷ ಬಲಿ, ನಾಗಪ್ರತಿಷ್ಠೆ ಶೇಷ ಸೇವೆಗಳಲ್ಲಿ ಕೂಡ ಹೆಚ್ಚಳವಾಗಿದೆ. ಮಹಾಪೂಜೆ, ಕಾರ್ತಿಕ ಪೂಜೆ, ಮಹಾಭಿಷೇಕ ನೆರವೇರಿಸಿದರು.

ಅಕ್ಷರಾ ವಸತಿ ಗೃಹದ ಹಿಂಭಾಗದಲ್ಲಿನ ವಾಹನ ನಿಲುಗಡೆ ಸ್ಥಳ, ಮತ್ತು ಬಿಲದ್ವಾರದ ಬಳಿ,ಸವಾರಿ ಮಂಟಪ ತುಂಬಿ ಹೋಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.