ADVERTISEMENT

ಡಿ.24ರಂದು ಕುಕ್ಕೆಯಲ್ಲಿ ನೀರು ಬಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 13:39 IST
Last Updated 23 ಡಿಸೆಂಬರ್ 2023, 13:39 IST
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ   

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.24ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಚಂಪಾಷಷ್ಠಿ ಮಹೋತ್ಸವ ಸಮಾಪನಗೊಳ್ಳಲಿದೆ. ರಾತ್ರಿ ನೀರಿನಲ್ಲಿ ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.

ಮದ್ಯಾಹ್ನ ಮಹಾಪೂಜೆ ಬಳಿಕ ದೇಗುಲದ ಹೊರಾಂಗಣದ ಸುತ್ತ ನೀರು ತುಂಬಲಾಗುತ್ತದೆ. ರಾತ್ರಿ ಮಹಾಪೂಜೆ ಬಳಿಕ ತುಂಬಿರುವ ನೀರಿನಲ್ಲಿ ಬಂಡಿ ತೇರನ್ನು ಎಳೆಯಲಾಗುತ್ತದೆ. ವರ್ಷದಲ್ಲಿ ಒಮ್ಮೆ ಈ ಉತ್ಸವ ನಡೆಯುತ್ತದೆ.

ಬಳಿಕ ದೀಪಾರಾಧನೆ ಯುಕ್ತ ಪಾಲಕಿ ಉತ್ಸವ, ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯುತ್ತದೆ. ಡಿ.25ರಂದು ಮುಂಜಾನೆ ಪುರುಷರಾಯ ದೈವವು ಕುಮಾರಧಾರ ಮತ್ಯ್ಸ ತೀರ್ಥದಲ್ಲಿರುವ ಮೀನುಗಳಿಗೆ ಆಹಾರ ನೀಡುವುದು ವಿಶೇಷ. 2024ರ ಜನವರಿ 16ರಂದು ಕ್ಷೇತ್ರದಲ್ಲಿ ಕಿರುಷಷ್ಠಿ ಮಹೋತ್ಸವ ಜರುಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.