ADVERTISEMENT

ಚಂದ್ರಗ್ರಹಣದ ಅಂಗವಾಗಿ ಮಾ.2, 3ರಂದು ಕುಕ್ಕೆ ದೇವರ ದರ್ಶನ, ಸೇವೆ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
ಸುಬ್ರಹ್ಮಣ್ಯ ದೇವಸ್ಥಾನ
ಸುಬ್ರಹ್ಮಣ್ಯ ದೇವಸ್ಥಾನ   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಚಂದ್ರಗ್ರಹಣದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್‌ 2 ಮತ್ತು 3ರಂದು ದೇವರ ದರ್ಶನ ಹಾಗೂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇವಳದ ಆಡಳಿತ ತಿಳಿಸಿದೆ.

ಮಾರ್ಚ್‌ 2 ಮತ್ತು 3ರಂದು ಸರ್ಪಸಂಸ್ಕಾರ ಪೂಜೆ ನಡೆಯುವುದಿಲ್ಲ. 3ರಂದು ಯಾವುದೇ ಸೇವೆಗಳು ಇರುವುದಿಲ್ಲ. ಅಂದು ಮಧ್ಯಾಹ್ನದ ಮಹಾಪೂಜೆ ಬೆಳಿಗ್ಗೆ 8ಕ್ಕೆ ನಡೆಯಲಿದೆ. 9 ಗಂಟೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬೆಳಿಗ್ಗೆಯ ಉಪಾಹಾರ 9 ಗಂಟೆವರೆಗೆ ಸಿಗಲಿದೆ. ಮಧ್ಯಾಹ್ನ ಭೋಜನ ವ್ಯವಸ್ಥೆ ಇರುವುದಿಲ್ಲ. ಸಂಜೆ 7ರ ನಂತರ ದೇವರ ಮಹಾಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT