ADVERTISEMENT

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅರ್ಚಕರ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 11:49 IST
Last Updated 29 ಮಾರ್ಚ್ 2020, 11:49 IST
ಕುಕ್ಕೆ  ಸುಬ್ರಹ್ಮಣ್ಯ ದೇವಸ್ಥಾನ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ   

ಸುಬ್ರಹ್ಮಣ್ಯ: ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದ್ದು, ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿ ಬೀಸುವ ಪ್ರಕರಣಗಳು ದಿನನಿತ್ಯ ನಡೆಯುತ್ತಲೇ ಇವೆ. ಅದರಂತೆ ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದ ಅರ್ಚಕರ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ.

ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಶಂಕರ್ ಎನ್ನುವ ಕಾನ್ಸ್‌ಟೇಬಲ್ ಅವರು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

ಅರ್ಚಕರು ತಾನು ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತ ಇರುವುದಾಗಿ ದೇವಳದ ಕೀಯನ್ನು ತೋರಿಸಿ ಹೇಳಿದರೂ ಬಿಡದ ಪೋಲೀಸ್ ಸಿಬ್ಬಂದಿ ಅರ್ಚಕರನ್ನು ಬೈದದಲ್ಲದೆ, ಕೈಯಲ್ಲಿದ್ದ ಕೋಲಿನಿಂದ ಬಾಸುಂಡೆ ಏಳುವಂತೆ ಹಲ್ಲೆ ನಡೆಸಿದ್ದಾರೆ.

ADVERTISEMENT

ಜಿಲ್ಲೆಯ ಖ್ಯಾತ ದೇವಳದ ಮುಖ್ಯ ಅರ್ಚಕರು ತನ್ನ ದೈನಂದಿನ ಕಾರ್ಯ ನಡೆಸಲು ತೆರಳುವಾಗಲೂ ಈ ರೀತಿ ಅಮಾನುಷವಾಗಿ ಹಲ್ಲೆಗೈದ ಈ ಪೋಲೀಸ್ ಸಿಬ್ಬಂದಿ ಸ್ಥಳೀಯರೇ ಆಗಿದ್ದು, ಗುರುತು ಇದ್ದರೂ ಈ ರೀತಿ ವರ್ತಿಸಿರುವ ಘಟನೆಯನ್ನು ವಿಪ್ರಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಮತ್ತು ಹಲ್ಲೆ ನಡೆಸಿದ ಪೋಲೀಸ್ ಸಿಬ್ಬಂದಿಯನ್ನ ತಕ್ಷಣವೇ ಅಮಾನತು ಮಾಡಬೇಕಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.