ADVERTISEMENT

ಕುಕ್ಕೆಯ ಜಾತ್ರೋತ್ಸವಕ್ಕೆ ಸಿದ್ಧಗೊಳ್ಳುತಿದೆ ಬೆತ್ತದ ರಥ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 12:46 IST
Last Updated 29 ನವೆಂಬರ್ 2024, 12:46 IST
ಚಂಪಾಷಷ್ಠಿ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಬ್ರಹ್ಮರಥ ಹಾಗೂ ಪಂಚಮಿ ರಥ
ಚಂಪಾಷಷ್ಠಿ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಬ್ರಹ್ಮರಥ ಹಾಗೂ ಪಂಚಮಿ ರಥ   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ಬೆತ್ತದ ರಥಗಳು ಪ್ರಧಾನವಾಗಿವೆ. ಮಲೆಕುಡಿಯ ಜನಾಂಗದವರು ತಮ್ಮ ಕೈಚಳಕದಿಂದ ತೇರನ್ನು ಸಿದ್ಧಗೊಳಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಯಾವುದೇ ಹಗ್ಗ ಬಳಸದೆ ಬೆತ್ತಗಳಿಂದಲೇ ವಿಶಿಷ್ಟವಾದ ರಥವನ್ನು ಅವರು ನಿರ್ಮಿಸುತ್ತಿದ್ದಾರೆ. ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಮತ್ತೊಂದು ವಿಶೇಷ. ಸಾಲಾಂಕೃತ ರಥಗಳು ಜಾತ್ರೆಯ ಮೆರುಗನ್ನು ಇಮ್ಮಡಿಗೊಳಿಸುತ್ತದೆ. ಇದೀಗ ಮೂಲನಿವಾಸಿ ಮಲೆಕುಡಿಯ ಜನಾಂಗದವರು ಕಾಡಿನಿಂದ ಸಂಗ್ರಹಿಸಿದ ಬೆತ್ತವನ್ನು ಉಪಯೋಗಿಸಿ ರಥಗಳನ್ನು ಸಂಪ್ರದಾಯದಂತೆ ನಿರ್ಮಿಸುತ್ತಿದ್ದಾರೆ.

ರಥದ ಅಟ್ಟೆಯನ್ನು ಬಿದಿರು ಹಾಗೂ ಬ್ರಹ್ಮರಥದದ ಮೆಲ್ಭಾಗವನ್ನು ಬೆತ್ತಗಳಿಂದ ರಚಿಸುತ್ತಾರೆ. ಐದು ಅಂತಸ್ತುಗಳ ಬ್ರಹ್ಮರಥಕ್ಕೆ ಹಲಗೆಯನ್ನಿಟ್ಟು ರಥದ ಕೆಲಸ ಆರಂಭಿಸಿದ್ದಾರೆ. ರಥವನ್ನು ಬಟ್ಟೆಯ ಪತಾಕೆಗಳಿಂದ ಸಿಂಗರಿಸುತ್ತಾರೆ. ಈ ಬಾರಿ ಸುಮಾರು 61 ಮಂದಿ ಹಿರಿಯರು ಮತ್ತು ಕಿರಿಯರು ರಥ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ADVERTISEMENT
ಲಕ್ಷದೀಪೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಚಂದ್ರಮಂಡಲ ರಥ
ಕಾಶಿಕಟ್ಟೆಯಲ್ಲಿ ಸಿದ್ಧಗೊಳ್ಳುತ್ತಿರುವ ಗುರ್ಜಿರಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.