ADVERTISEMENT

ಇಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 8:43 IST
Last Updated 12 ಫೆಬ್ರುವರಿ 2021, 8:43 IST
ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಚರಣೆ
ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಚರಣೆ   

ಮಂಗಳೂರು: ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಚರಣೆಯಲ್ಲಿ ಸೆರೆ ಹಿಡಿಯಲಾಗಿದೆ‌.

ಚಿರತೆಗೆ ಅರಿವಳಿಕೆಯನ್ನು ಗನ್ ಮೂಲಕ ಕೊಡಿಸಿ, ಬಳಿಕ ಬಲೆಯಲ್ಲಿ ಸೆರೆ ಹಿಡಿದು, ಬೋನಿನಲ್ಲಿ ಕೂಡಿ ಹಾಕಲಾಗಿದೆ.

ಇದಕ್ಕೂ ಮೊದಲು ಹೇರ ನಿವಾಸಿಗಳಾದ ಚಂದ್ರಶೇಖರ ಹಾಗೂ ಸೌಮ್ಯ ಕಾಮತ್ ಅವರು ರಾತ್ರಿ ತೋಟದಲ್ಲಿ ನೀರು ಹಾಯಿಸಲು ತೆರಳಿದ್ದಾಗ ಚಿರತೆ ದಾಳಿ ನಡೆಸಿತ್ತು.

ADVERTISEMENT

ಗಾಯಾಳುಗಳನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದ ಚಿರತೆ ತೋಟದೊಳಗೆ ಮರವೇರಿ ಕುಳಿತಿತ್ತು. ಮರದಲ್ಲಿ ಕುಳಿತಿದ್ದ ಚಿರತೆಗೆ ಗನ್‌ನಿಂದ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.