ADVERTISEMENT

ಮಂಗಳೂರು | ಲಯನ್ಸ್ ಸಮ್ಮೇಳನ ‘ಉತ್ಸವ್’ 6ಕ್ಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 4:43 IST
Last Updated 4 ಜನವರಿ 2024, 4:43 IST
<div class="paragraphs"><p>ಸಾಂಧರ್ಬಿಕ ಚಿತ್ರ</p></div>

ಸಾಂಧರ್ಬಿಕ ಚಿತ್ರ

   

ಮಂಗಳೂರು: ಲಯನ್ಸ್ ಜಿಲ್ಲೆ 317 ‘ಡಿ’ ಪ್ರಾಂತ್ಯ 4ರ ಪ್ರಾಂತೀಯ ಸಮ್ಮೇಳನ ‘ಉತ್ಸವ್’ ನಗರದ ಮಿಲಾಗ್ರಿಸ್ ಚರ್ಚ್‌ ಸಭಾಭವನದಲ್ಲಿ ಜ.6ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಾಂತ್ಯಾಧ್ಯಕ್ಷೆ ಉಮಾ ಹೆಗ್ಡೆ ಈ ಬಗ್ಗೆ ಮಾಹಿತಿ ನೀಡಿ, ‘ಪ್ರಾಂತೀಯ ಸಮ್ಮೇಳನದ ಸವಿನೆನಪಿಗಾಗಿ ಶಕ್ತಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಶ್ವತ ಯೋಜನೆಯಾಗಿ ಸ್ಮಾರ್ಟ್ ಕ್ಲಾಸ್‌ ಅನ್ನು ನೀಡಲಾಗಿದೆ. ಮೂಡುಬಿದಿರೆಯ ಸ್ಪೂರ್ತಿ ವಿಶೇಷ ಶಿಕ್ಷಣ ಸಂಸ್ಥೆಗೆ ಅಗತ್ಯವಿರುವ ಮೂಲ ಸೌಲಭ್ಯ, ಲಯನ್ಸ್ ಡಯಾಲಿಸಿಸ್ ಸಂಸ್ಥೆಗೆ ಆರ್ಥಿಕ ನೆರವು ಮತ್ತಿತರ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಇಸ್ರೊದ ನಿವೃತ್ತ ಗ್ರೂಪ್ ಡೈರೆಕ್ಟರ್ ಯು.ಎನ್. ವಸಂತಕುಮಾರಿ, ಶೇ 1 ಕ್ಲಬ್ ಸ್ಥಾಪಕ ಹಾಗೂ ಸಿಇಒ ಶರಣ್ ಹೆಗ್ಡೆ ಅತಿಥಿಗಳಾಗಿ ಭಾಗವಹಿಸುವರು. ಲಯನ್ಸ್ ಪ್ರಮುಖ ಬಾಲಕೃಷ್ಣ ಹೆಗ್ಡೆ ಸಮ್ಮೇಳನ ಉದ್ಘಾಟಿಸುವರು’ ಎಂದರು.

ADVERTISEMENT

ಸಮ್ಮೇಳನ ಸಮಿತಿ ಅಧ್ಯಕ್ಷೆ ಆಶಾ ಚಂದ್ರಮೋಹನ್, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರವೀಣ್ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಲಯನ್ಸ್ ಕಂಕನಾಡಿ ಪಡೀಲ್ ಅಧ್ಯಕ್ಷ ಕರುಣಾಕರ್ ಎಂ.ಎಚ್., ಸಮ್ಮೇಳನ ಸಮಿತಿ ಕಾರ್ಯದರ್ಶಿ ಆಶಾ ಶೆಟ್ಟಿ, ಕೋಶಾಧಿಕಾರಿ ಸ್ವರೂಪ್ ಎನ್. ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.