ADVERTISEMENT

ಮಂಗಳೂರು: ಮೀನುಗಾರಿಕಾ ದೋಣಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 3:06 IST
Last Updated 10 ಅಕ್ಟೋಬರ್ 2023, 3:06 IST
   

ಮಂಗಳೂರು: ನಗರದ ಹಳೆಬಂದರು ದಕ್ಕೆ ಬಳಿ ಮೀನುಗಾರಿಕಾ ದೋಣಿಯೊಂದಕ್ಕೆ ಮಂಗಳವಾರ ಮುಂಜಾನೆ ಬೆಂಕಿ ಹೊತ್ತಿಕೊಂಡಿದೆ.

'ದೋಣಿಯೊಂದಕ್ಕೆ ಬೆಂಕಿ ಹೊತ್ತುಕೊಂಡ ಬಗ್ಗೆ ಬೆಳಿಗ್ಗೆ 4.50 ಮಾಹಿತಿ ಬಂದಿತ್ತು.‌ ತಕ್ಷಣವೇ ಪಾಂಡೇಶ್ವರದ ಅಗ್ನಿಶಾಮಕ ಠಾಣೆಯ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದೇವೆ. ದೋಣಿಯಲ್ಲಿ ಡೀಸೆಲ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಲಂಗರು ಹಾಕಿದ್ದಾಗಲೇ ದೋಣಿಗೆ ಬೆಂಕಿ ತಗುಲಿದೆ. ಅದರ ಹಗ್ಗ ಬಿಚ್ಚಿ ಬಿಟ್ಟಿದ್ದಾರೆ. ದೋಣಿ ಕೆಲವು ದೂರ ನೀರಿನಲ್ಲಿ ಸಾಗಿತ್ತು. ಆದ್ದರಿಂದ ಬೆಂಕಿ ಇತರ ದೋಣಿಗಳಿಗೆ ಹಬ್ಬುವುದು ತಪ್ಪಿದೆ' ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

'ದೋಣಿ ಯಾರದ್ದು ಎಂಬುದು ಇನ್ನೂ ಖಚಿತಪಟ್ಟಿಲ್ಲ. ಎಷ್ಟು ನಷ್ಟ ಉಂಟಾಗಿದೆ ಎಂಬುದನ್ನು ಇನ್ನಷ್ಟೇ ಅಂದಾಜಿಸಬೆಕಿದೆ' ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.