ADVERTISEMENT

ಬೆಥನಿ ಶತಮಾನೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:10 IST
Last Updated 22 ಜುಲೈ 2021, 3:10 IST
ಮಂಗಳೂರಿನ ಬೆಥನಿ  ಲಿಟ್ಲ್ ಫ್ಲವರ್  ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಿಷಪ್‍ ಪೀಟರ್ ಪಾವ್ಲ್ ಸಲ್ಡಾನ್ಹ  ಅವರು  ಲನೆ ನೀಡಿದರು.
ಮಂಗಳೂರಿನ ಬೆಥನಿ  ಲಿಟ್ಲ್ ಫ್ಲವರ್  ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಿಷಪ್‍ ಪೀಟರ್ ಪಾವ್ಲ್ ಸಲ್ಡಾನ್ಹ  ಅವರು  ಲನೆ ನೀಡಿದರು.   

ಮಂಗಳೂರು: ‘ಬೆಥನಿ ಲಿಟ್ಲ್ ಫ್ಲವರ್ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪವಿತ್ರ ಬಲಿಪೂಜೆಯೊಂದಿಗೆ ಚಾಲನೆ ನೀಡಲಾಯಿತು.

ಮಂಗಳೂರು ಬಿಷಪ್‍ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹ ಬಲಿಪೂಜೆಯನ್ನು ನೆರವೇರಿಸಿದರು.‘ಬೆಥನಿ ಸಂಸ್ಥೆಯ ಆಡಳಿತಾಧಿಕಾರಿ ಕ್ಲಿಯೋಫ ಪೋಪ್‌ ಆಶೀರ್ವಚನದ ಸಂದೇಶವನ್ನು ವಾಚಿಸಿದರು. ಬಿಷಪ್‍ರವರು ತಮ್ಮ ಪವಿತ್ರ ಸಂದೇಶದಲ್ಲಿ ದೇವರ ಸೇವಕ ಆರ್.ಎಫ್.ಸಿ ಮಸ್ಕರೇನಸ್‍ ಅವರ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಆಳವಡಿಸಬೇಕು ಎಂದು ತಿಳಿಸಿದರು.

ಬೆಥನಿ ಸಂಸ್ಥೆಯ ಸುಪಿರಿಯರ್ ಜನರಲ್ ರೇವರೆಂಡ್ ರೋಸ್ ಸೆಲಿನ್‍ ಆರ್.ಎಫ್.ಸಿ ಮಸ್ಕರೇನಸ್‍ ಮಾತನಾಡಿ ಸಂಸ್ಥೆಯು ಭವಿಷ್ಯದಲ್ಲಿಯೂ ಧಾರ್ಮಿಕ,ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಲಿದೆ ಎಂದರು. ಸಿಸ್ಟರ್‌ ಶಾಂತಿಪ್ರಿಯ ಲೆಲ್ಲಿಸ್, ಎಪಿಸ್ಕೋಪಲ್ ಚರ್ಚ್‍ನ ಧರ್ಮ ಗುರು ಫಾದರ್‌ ವಿನ್ಸೆಂಟ್ ಮೊಂತೆರೊ , ಫಾದರ್‌, ಪ್ರವೀಣ್ ಮಾರ್ಟಿಸ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.