ADVERTISEMENT

ಇಲ್ಲದ ಒತ್ತಡ, ಬಹುತೇಕ ಖಾಲಿ ಖಾಲಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 4:31 IST
Last Updated 1 ಏಪ್ರಿಲ್ 2020, 4:31 IST

ಮಂಗಳೂರು:ಲಾಕ್ಡೌನ್ ನಡುವೆ ಬುಧವಾರ ಬೆಳಿಗ್ಗೆ 7 ರಿಂದ 12 ರ ತನಕ ಜಿಲ್ಲಾಡಳಿತವು ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ನಿರ್ಬಂಧ ಸಡಿಲಿಕೆ ಮಾಡಿದ್ದು, ನಗರದಲ್ಲಿ ಜನ ಖರೀದಿಯಲ್ಲಿ ತೊಡಗಿದ್ದರು.

ಆದರೆ, ಮಂಗಳವಾರದ ಜನ ದಟ್ಟಣೆ ಕಂಡುಬರಲಿಲ್ಲ. ಬಹುತೇಕ ಖಾಲಿ ಖಾಲಿಯಾಗಿತ್ತು. ಕೇಂದ್ರ ಮಾರುಕಟ್ಟೆಗೆ ಸಾಮಾನ್ಯ ಜನರ ಪ್ರವೇಶ ನಿಷೇಧಿಸಲಾಗಿತ್ತು. ರಾತ್ರಿ 11 ರಿಂದ ಬೆಳಿಗ್ಗೆ 4 ರ ತನಕ ಸಗಟು ವ್ಯಾಪಾರ ನಡೆಯಿತು. ಬಳಿಕ ಬಂದ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದರು.

ಉಳಿದಂತೆ ಎಲ್ಲಿಯೂ ಒತ್ತಡ ಕಂಡು ಬರಲಿಲ್ಲ. ಆದರೆ ಸಾಮಗ್ರಿ ಕೊರತೆ ಇದೆ. ದರವೂ ಹೆಚ್ಚಿದೆ ಎಂದು ಕೆಲವು ಗ್ರಾಹಕರು ದೂರಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.