ADVERTISEMENT

ಮಂಗಳೂರಿಂದ ನವಿ ಮುಂಬೈ ವಿಮಾನ ಸೇವೆ 25ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:42 IST
Last Updated 1 ಡಿಸೆಂಬರ್ 2025, 7:42 IST
ಜನವರಿಯಿಂದ ₹2,500 ದರದ ವಿಮಾನ ಸೇವೆ
ಜನವರಿಯಿಂದ ₹2,500 ದರದ ವಿಮಾನ ಸೇವೆ   

ಮಂಗಳೂರು: ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ಕ್ರಿಸ್‌ಮಸ್‌  ದಿನದಂದು ( ಇದೇ 25) ದೈನಂದಿನ ನೇರ ವಿಮಾನ ಸೇವೆ ಆರಂಭವಾಗಲಿದೆ. 

ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನಗಳು ದಿನದಲ್ಲಿ ನಾಲ್ಕು ಬಾರಿ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಒಂದು ವಿಮಾನ ದಿನದಲ್ಲಿ ಒಮ್ಮೆ ಮಂಗಳೂರು - ಗ್ರೀಫ್‌ ಫೀಲ್ಡ್‌ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ನವಿ ಮುಂಬೈ ನಡುವೆ ಸಂಚಾರ ನಡೆಸಲಿವೆ. 

ನವಿ ಮುಂಬೈನಿಂದ  ಮಂಗಳೂರಿಗೆ (6ಇ 865) ಬೆಳಗ್ಗೆ 10.40ಕ್ಕೆ ಬಂದಿಳಿಯುವ ವಿಮಾನವು ಮಧ್ಯಾಹ್ನ 12.10ಕ್ಕೆ ನವಿಮುಂಬೈಗೆ ತೆರಳಲಿದೆ.  ಸೋಮವಾರ ಮತ್ತು ಗುರುವಾರ  ನವಿ ಮುಂಬೈನಿಂದ  ಮಂಗಳೂರಿಗೆ ಸಂಜೆ 4.05ಕ್ಕೆ ಬಂದಿಳಿಯುವ ವಿಮಾನವು ಮಂಗಳೂರು - ನವಿ ಮುಂಬೈ (6ಇ 866) ನಡುವೆ ಸಂಜೆ 5.45ಕ್ಕೆ ಇಲ್ಲಿಂದ ನವಿಮುಂಬೈಗೆ ತೆರಳಲಿದೆ. 

ADVERTISEMENT

ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ನವಿ ಮುಂಬೈನಿಂದ ಮಂಗಳೂರಿಗೆ ಮಧ್ಯಾಹ್ನ 12.40ಕ್ಕೆ ಬಂದಿಳಿಯುವ ವಿಮಾನ (6E 866) ಮಧ್ಯಾಹ್ನ 2.20ಕ್ಕೆ ಇಲ್ಲಿಂದ ನವಿಮುಂಬೈಗೆ ಹೊರಡಲಿದೆ.  ಈ ಹೊಸ ವಿಮಾನ ಸೇವೆಯಿಂದ ವ್ಯಾಪಾರಿಗಳು, ಪ್ರವಾಸಿಗರು ಹಾಗೂ ಕರಾವಳಿ-ಮುಂಬೈ ನಡುವೆ  ಸಂಚರಿಸುವ ಸಾವಿರಾರು ಮಂದಿಗೆ ಅನುಕೂಲವಾಗಲಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ (ಛತ್ರಪತಿ ಶಿವಾಜಿ) ಹಾಗೂ ತಿರುವನಂತಪುರ ಸೇರಿ ದೇಶದ ಆರು ನಗರಗಳಿಗೆ ತಾಣಗಳಿಗೆ ವಿಮಾನ ಸಂಪರ್ಕವಿದೆ. ನವಿ ಮುಂಬೈ ಮಂಗಳೂರಿನಿಂದ ನೇರ ವಿಮಾನ ಸಂಪರ್ಕ ಏಳನೇ ದೇಸಿ ವಿಮಾನನಿಲ್ದಾಣ ಎಂದು ಮಂಗಳೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.