ADVERTISEMENT

ದಯಾ ವಿಶೇಷ ಶಾಲೆಗೆ ಮಂಗಳೂರು ಬಿಷಪ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 3:45 IST
Last Updated 12 ಮಾರ್ಚ್ 2025, 3:45 IST
ದಯಾ ವಿಶೇಷ ಶಾಲೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ್ಹಾ ಭೇಟಿ ನೀಡಿದರು
ದಯಾ ವಿಶೇಷ ಶಾಲೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ್ಹಾ ಭೇಟಿ ನೀಡಿದರು   

ಬೆಳ್ತಂಗಡಿ: ಇಲ್ಲಿನ ಲಾಯಿಲ ದಯಾ ವಿಶೇಷ ಶಾಲೆಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ್ಹಾ ಭೇಟಿ ನೀಡಿದರು.

‘ಅಂಗವಿಕಲ ಮಕ್ಕಳ ಮನಸ್ಸಿನಲ್ಲಿ ಕಪಟವಿಲ್ಲ. ಈ ಮಕ್ಕಳಲ್ಲಿ ವಿಶೇಷವಾದ ಪ್ರೀತಿ ಇದ್ದು, ದಯಾ ವಿಶೇಷ ಶಾಲೆಯ ಚಟುವಟಿಕೆ ಶ್ಲಾಘನೀಯ’ ಎಂದರು.

ಮಂಗಳೂರು ಧರ್ಮ ಪ್ರಾಂತ್ಯದ ವತಿಯಿಂದ ದಯಾ ವಿಶೇಷ ಶಾಲೆಯ ನಿರ್ದೇಶಕ ಫಾ.ವಿನೋದ್ ಮಸ್ಕರೇನ್ಹಸ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಬೆಳ್ತಂಗಡಿ ಪ್ರಾಂತ್ಯದ ಪ್ರಧಾನ ಧರ್ಮ ಗುರು ಫಾ.ವಾಲ್ಟರ್ ಡಿಮೆಲ್ಲೊ, ಬೆಳ್ತಂಗಡಿ ಹೋಲಿ ರಿಡೀಮರ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲ ಫಾ.ಕ್ಲಿಫರ್ಡ್ ಪಿಂಟೊ, ಧರ್ಮಾಧ್ಯಕ್ಷರ ಕಾರ್ಯದರ್ಶಿ ಫಾ.ತ್ರಿಶನ್, ದಯಾ ವಿಶೇಷ ಶಾಲೆಯ ಸಹ ನಿರ್ದೇಶಕ ಫಾ.ರೋಹನ್ ಲೋಬೊ ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ದಿವ್ಯ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.