ADVERTISEMENT

ಮಂಗಳೂರು: ಮತೀಯ ಗೂಂಡಾಗಿರಿ; ತಂದೆ ಮಗ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 10:24 IST
Last Updated 26 ಫೆಬ್ರುವರಿ 2026, 10:24 IST
<div class="paragraphs"><p>ಪೊಲೀಸ್ ವಶ</p></div>

ಪೊಲೀಸ್ ವಶ

   

ಮಂಗಳೂರು: ಮತೀಯ ಗೂಂಡಾಗಿರಿ; ತಂದೆ ಮಗ ಪೊಲೀಸ್ ವಶಕ್ಕೆ ಪರಿಶಿಷ್ಟ ಜಾತಿಯ ಅಪ್ರಾಪ್ತ ವಯಸ್ಸಿನ ಬಾಲಕ (14 ವರ್ಷ )ಮತ್ತು ಬೇರೆ ಜಾತಿಯ ಬಾಲಕಿ ನಗರದ ಬಾಬುಗೆಡ್ಡೆಯಲ್ಲಿ ರೈಲು ಹಳಿ ಮೇಲೆ ಕುಳಿತು ಮಾತನಾಡುತ್ತಿದ್ದ ವೇಳೆ ಅವರ ವಿಡಿಯೊ ಮಾಡಿ, ಬಾಲಕನ ಮೇಲೆ ಹಲ್ಲೆ ನಡೆಸಿದ ಕುರಿತು ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆರೋಪಿಗಳಾದ ಸ್ಟೀವನ್ ಮೊಂತೆರೊ ಹಾಗೂ ಆತನ ಮಗ ಅವಿಲ್ ಮೊಂತೆರೊನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಬುಗೆಡ್ಡೆಯ ಗ್ರಾಮ ಸಂಘದ ಬಳಿಯ ರೈಲು ಹಳಿಯಲ್ಲಿ ಇದೇ 23 ರಂದು ಸಂಜೆ ಅಪ್ರಾಪ್ತ ವಯಸ್ಸಿನ ಹುಡುಗ ಮತ್ತು ಹುಡುಗಿ ಜೊತೆಯಲ್ಲಿ ಕುಳಿತು ಮಾತನಾಡುತ್ತಿದ್ದಾಗ ಆರೋಪಿಗಳಾದ ಸ್ಟೀವನ್ ಮೊಂತೆರೊ ಹಾಗೂ ಅವಿಲ್ ಮೊಂತೆರೊ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವೀಡಿಯೊ ಚಿತ್ರೀಕರಣ ನಡೆಸಿದ್ದರು.

ADVERTISEMENT

ಆ ವಿಡಿಯೊವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸುವುದಾಗಿ ಬೆದರಿಸಿದ್ದರು. ಈ ವೇಳೆ ಹುಡುಗಿ ಅಲ್ಲಿಂದ ತೆರಳಿದ್ದಳು. ಬಳಿಕ ಆ ಹುಡುಗನನ್ನು ರೈಲ್ವೆ ಹಳಿ ಪಕ್ಕದ ರಸ್ತೆಗೆ ಎಳೆದುಕೊಂಡು ಹೋಗಿ ತಂದೆ ಮಗ ಇಬ್ಬರು ಸೇರಿ ಹಲ್ಲೆ ನಡೆಸಿದ್ದರು. ಇನ್ನೊಮ್ಮೆ ಈ ಕಡೆಗೆ ಬಂದರೆ ನಿನ್ನ ಕೈಕಾಲು ಮುರಿಯುವುದಾಗಿ ಹೇಳಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಹಲ್ಲೆಗೊಳಗಾದ ಹುಡುಗನ ತಂದೆ ನಗರದ ದಕ್ಷಿಣ ಠಾಣೆಗೆ ದೂರು ನೀಡಿದ್ದರು.

'ಆರೋಪಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ನಡೆಸಿ ಅಗತ್ಯಕ್ರಮ ಕೈಗೊಳ್ಳುತ್ತೇವೆ' ಎಂದು ನಗರ ಪೊಲೀಸ್‌ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.