
ಮಂಗಳೂರು: ದೇಶದ ಪ್ರಮುಖ ಓಟಗಾರರು ಪಾಲ್ಗೊಳ್ಳುವ ಮಂಗಳೂರು ಮ್ಯಾರಥಾನ್ ನವೆಂಬರ್ 10ರಂದು ನಗರದಲ್ಲಿ ನಡೆಯಲಿದೆ ಎಂದು ಮಂಗಳೂರು ರನ್ನರ್ಸ್ ಕ್ಲಬ್‌ನ ರೇಸ್ ನಿರ್ದೇಶಕ ಅಭಿಲಾಶ್ ಡೊಮಿನಿಕ್ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ ಒಂದರಂದು ಸಂಜೆ 5.30ಕ್ಕೆ ನಗರದ ಪಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮ್ಯಾರಥಾನ್‌ನ ಪೂರ್ವಭಾವಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು. ನಟ ಅರವಿಂದ ಬೋಳಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ರಾಜು ಕೆ ಮತ್ತು ಉದ್ಯಮಿ ಸುಯೋಗ್ ಶೆಟ್ಟಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಈ ಬಾರಿ ಫುಲ್ ಮ್ಯಾರಥಾನ್ ಜೊತೆಯಲ್ಲಿ ‘ಟ್ವೆಂಟಿ ಮೈಲರ್’ ಎಂಬ 32.18 ಕಿಲೊಮೀಟರ್ ದೂರದ ಓಟವನ್ನು ಸೇರಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಫುಲ್ ಮ್ಯಾರಥಾನ್ ಓಡಲು ಬಯಸುವವರಿಗೆ ಅನುಕೂಲ ಆಗಲಿದೆ. ಹಾಫ್ ಮ್ಯಾರಥಾನ್, 10ಕೆ, 5ಕೆ ಮತ್ತು 2 ಕಿಲೊಮೀಟರ್ ದೂರದ ‘ಗಮ್ಮತ್ ರನ್’ ಕೂಡ ಇರಲಿದೆ. 5 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.
ಅಮರ್ ಕಾಮತ್ ಮತ್ತು ಪ್ರಾಚಿ ಕಾಮತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.