ADVERTISEMENT

ಮಂಗಳೂರು: ರೋಟರಿಯಿಂದ ಮಳೆನೀರು ಸಂಗ್ರಹ ಘಟಕ ದೇಣಿಗೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 12:15 IST
Last Updated 24 ಮಾರ್ಚ್ 2025, 12:15 IST
ಸುರತ್ಕಲ್‍ನ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವಿದ್ಯಾ ವಿನಾಯಕ ಆವರಣದಲ್ಲಿ ರೋಟರಿ ಕ್ಲಬ್ ಸುರತ್ಕಲ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ  ನಿರ್ಮಿಸಿರುವ ಮಳೆ ನೀರು ಸಂಗ್ರಹ ಘಟಕವನ್ನು ರೋಟರಿ ಗವರ್ನರ್‌ ವಿಕ್ರಮ್‍ದತ್ತ ಸೋಮವಾರ ಉದ್ಘಾಟಿಸಿದರು
ಸುರತ್ಕಲ್‍ನ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವಿದ್ಯಾ ವಿನಾಯಕ ಆವರಣದಲ್ಲಿ ರೋಟರಿ ಕ್ಲಬ್ ಸುರತ್ಕಲ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ  ನಿರ್ಮಿಸಿರುವ ಮಳೆ ನೀರು ಸಂಗ್ರಹ ಘಟಕವನ್ನು ರೋಟರಿ ಗವರ್ನರ್‌ ವಿಕ್ರಮ್‍ದತ್ತ ಸೋಮವಾರ ಉದ್ಘಾಟಿಸಿದರು   

ಮಂಗಳೂರು: ಸುರತ್ಕಲ್‍ನ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವಿದ್ಯಾ ವಿನಾಯಕ ಆವರಣದಲ್ಲಿ ರೋಟರಿ ಕ್ಲಬ್ ಸುರತ್ಕಲ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ₹2 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಳೆ ನೀರು ಸಂಗ್ರಹ ಘಟಕವನ್ನು ರೋಟರಿ ಜಿಲ್ಲೆ 3181ರ ಗವರ್ನರ್‌ ವಿಕ್ರಮ್‍ದತ್ತ ಅವರು ಸೋಮವಾರ ಉದ್ಘಾಟಿಸಿದರು.

ಬಳಿಕ, ರೋಟರಿ ಸಂಸ್ಥೆ ಶಾಲೆಗೆ ನೀಡಿದ ₹40,000 ಮೌಲ್ಯದ ದೃಶ್ಯ ಮತ್ತು ಶ್ರವಣ ಮಾಧ್ಯಮ ಉಪಕರಣವನ್ನು ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ನಾಗವೇಣಿ ಮತ್ತು ಮಾಲಿನಿ ಬಂಗೇರ ಅವರಿಗೆ ಹಸ್ತಾಂತರಿಸಲಾಯಿತು.

ಗೌರವ ಅತಿಥಿಯಾಗಿದ್ದ  ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಮಳೆ ನೀರು ಕೊಯ್ಲಿನ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಮಳೆ ನೀರನ್ನು ಸಂಗ್ರಹಿಸಿ ನೀರಿನ ಅಭಾವವನ್ನು ಪರಿಹರಿಸಬೇಕೆಂದು ಸಲಹೆ ನೀಡಿದರು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರಮಾನಂದ ರಾವ್ ರವರು ರೋಟರಿ ಸಂಸ್ಥೆಯ ನಿಃಸ್ವಾರ್ಥ ಸೇವಾ ಮನೋಭಾವನ್ನು ಶ್ಲಾಘಿಸಿದರು.

ADVERTISEMENT

ರೋಟರಿ ವಲಯ ಸಹಾಯಕ ಗವರ್ನರ್‌ ರಂಜನ್ ಮತ್ತು ಕೆ.ಎಂ. ಹೆಗ್ಡೆ ವೇದಿಕೆಯಲ್ಲಿದ್ದರು. ರೋಟರಿ ಕ್ಲಬ್ ಸುರತ್ಕಲ್‍ನ ಅಧ್ಯಕ್ಷ ಸಂದೀಪ್ ರಾವ್ ಸ್ವಾಗತಿಸಿದರು. ರೋಟರಿ ಕ್ಲಬ್ ಸಿಟಿ ಸಂಸ್ಥೆಯ ಅಧ್ಯಕ್ಷ ಗಣೇಶ್ ಕೊಡ್ಲಮೊಗರು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.