ADVERTISEMENT

ಮಂಗಳೂರು | ಹ್ಯಾಕಥಾನ್: 10 ತಂಡಗಳಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 15:54 IST
Last Updated 13 ಡಿಸೆಂಬರ್ 2024, 15:54 IST
ಸುರತ್ಕಲ್ ಎನ್‌ಐಟಿಕೆಯಲ್ಲಿ ನಡೆದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್ ಸಾಫ್ಟ್‌ವೇರ್ ಎಡಿಷನ್‌ನ ಗ್ರ್ಯಾಂಡ್ ಫಿನಾಲೆಯ ವಿಜೇತರು
ಸುರತ್ಕಲ್ ಎನ್‌ಐಟಿಕೆಯಲ್ಲಿ ನಡೆದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್ ಸಾಫ್ಟ್‌ವೇರ್ ಎಡಿಷನ್‌ನ ಗ್ರ್ಯಾಂಡ್ ಫಿನಾಲೆಯ ವಿಜೇತರು   

ಮಂಗಳೂರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ (ಎನ್‌ಐಟಿಕೆ) ನಡೆದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್ ಸಾಫ್ಟ್‌ವೇರ್ ಎಡಿಷನ್‌ನ ಗ್ರ್ಯಾಂಡ್ ಫಿನಾಲೆಯ 7ನೇ ಆವೃತ್ತಿಯಲ್ಲಿ 10 ತಂಡಗಳು ವಿಜೇತರಾಗಿ ಹೊರಹೊಮ್ಮಿದವು. ಪ್ರತಿ ತಂಡದವರು ತಲಾ ₹1 ಲಕ್ಷ ಬಹುಮಾನ ಪಡೆದರು. ಕೆಲವು ಬಹುಮಾನಗಳನ್ನು ತಂಡಗಳು ಹಂಚಿಕೊಂಡವು.

ಕಲ್ಲಿದ್ದಲು ಸಚಿವಾಲಯದ ಸ್ಪರ್ಧೆಯ ಬಹುಮಾನ ವಿಜೇತರು: ಭಾರತೀಯ ಕಲ್ಲಿದ್ದಲು ಗಣಿಗಳು ತಮ್ಮ ಇಂಗಾಲದ ಹೆಜ್ಜೆ ಗುರುತನ್ನು ಪ್ರಮಾಣೀಕರಿಸಲು ಮತ್ತು ಇಂಗಾಲದ ತಟಸ್ಥತೆಯ ಮಾರ್ಗಗಳನ್ನು ಅನ್ವೇಷಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ವೆಬ್ ಅಪ್ಲಿಕೇಶನ್‌– ಹುಬ್ಬಳ್ಳಿಯ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ರಾಡೌರ್‌ನ ಸೇಠ್ ಜೈಪ್ರಕಾಶ್ ಮುಕುಂದ್ ಲಾಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಜೆಎಂಐಟಿ).

ಕಲ್ಲಿದ್ದಲು ಗಣಿಗಳ ಉತ್ಪಾದಕತೆ ಮತ್ತು ಸುರಕ್ಷತಾ ನಿರ್ವಹಣೆಗಾಗಿ ಅಪ್ಲಿಕೇಶನ್ ಮತ್ತು ವೆಬ್ ಆಧಾರಿತ ಸಾಫ್ಟ್‌ವೇರ್ –ಮುಂಬೈ ಸರ್ದಾರ್ ಪಟೇಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಭುವನೇಶ್ವರದ ಸಿ.ವಿ.ರಾಮನ್ ಗ್ಲೋಬಲ್ ಯೂನಿವರ್ಸಿಟಿ.

ಕಲ್ಲಿದ್ದಲು ವಲಯದ ಎಸ್ ಆ್ಯಂಡ್ ಟಿ, ಆರ್ ಆ್ಯಂಡ್ ಡಿ ಯೋಜನೆಗಳ ಅಪ್ಲಿಕೇಶನ್ ಆಧಾರಿತ ಯೋಜನಾ ಮೇಲ್ವಿಚಾರಣೆ–
ವಿಐಟಿ, ಭೋಪಾಲ್ ಮತ್ತು ಪುಣೆಯ ಜೆಎಸ್‌ಪಿಎಂನ ರಾಜರ್ಷಿ ಶಾಹು ಕಾಲೇಜ್ ಆಫ್ ಎಂಜಿನಿಯರಿಂಗ್.

ADVERTISEMENT

ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸ್ಪರ್ಧೆಯ ವಿಜೇತರು: ಶಿಕ್ಷಣ ಮತ್ತು ಜಾಗೃತಿ, ಡೋಪಿಂಗ್ ವಿರೋಧಿ ಮಾಹಿತಿಯ ಪ್ರಸಾರಕ್ಕಾಗಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ– ಚೆನ್ನೈನ ಸಾಯಿರಾಮ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.

ಗುಪ್ತಚರ ಮತ್ತು ತನಿಖೆಗಳು, ಡೋಪಿಂಗ್ ವಿರೋಧಿ ಪ್ರಯತ್ನಗಳನ್ನು ಹೆಚ್ಚಿಸುವುದು– ಥಾಣೆಯ ಎ.ಪಿ. ಶಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.

ಡೋಪಿಂಗ್ ವಿರೋಧಿ ಮಾಹಿತಿಯ ಗೇಮಿಫಿಕೇಶನ್–  ಹರಿಯಾಣದ ಜಿಡಿ ಗೋಯೆಂಕಾ ವಿಶ್ವವಿದ್ಯಾಲಯ ಮತ್ತು ತಮಿಳುನಾಡಿನ ರಾಜೀವ್ ಗಾಂಧಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೂತ್ ಡೆವಲಪ್‌ಮೆಂಟ್.

80ಕ್ಕೂ ಹೆಚ್ಚು ಮಹಿಳಾ ಸ್ಪರ್ಧಿಗಳು ಸೇರಿದಂತೆ ಒಟ್ಟು 230 ಜನರನ್ನು ಒಳಗೊಂಡ 33 ತಂಡಗಳು ಭಾಗವಹಿಸಿದ್ದವು. 18 ತಜ್ಞರು ತೀರ್ಪುಗಾರರು ಮೌಲ್ಯಮಾಪನ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.