ADVERTISEMENT

ತಪ್ಪೊಪ್ಪಿಗೆ – ಪ್ರಕರಣ ಸುಖಾಂತ್ಯ

ಮರೋಡಿ  - ಯಕ್ಷಗಾನದ ಬ್ಯಾನರ್ ಹರಿದ ವಿಚಾರ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 5:15 IST
Last Updated 5 ಡಿಸೆಂಬರ್ 2022, 5:15 IST

ಬೆಳ್ತಂಗಡಿ: ಮರೋಡಿಯಲ್ಲಿ ನಡೆದ ಆದಿ ಧೂಮಾವತಿ ದೇಯಿ ಬೈದೆತಿ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಮೇಳದ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣವು ಭಾನುವಾರ ಬಗೆಹರಿದಿದೆ.

ಶುಕ್ರವಾರ ರಾತ್ರಿ ಬ್ಯಾನರ್‌ ಅನ್ನು ಹರಿದು ಹಾಕಿದ್ದು, ಕೆಲವು ಬ್ಯಾನರ್‌ಗಳನ್ನು ಕೊಂಡೊಯ್ಯಲಾಗಿತ್ತು. ಇದು ಯಕ್ಷಗಾನ ವಿರೋಧಿ ಕಿಡಿಗೇಡಿಗಳ ಕೃತ್ಯ ಎಂದು ಭಕ್ತರು ಹಾಗೂ ಯಕ್ಷಗಾನ ಆಯೋಜಕರು ನೊಂದಿದ್ದರು.

‘ಭಕ್ತರೆಲ್ಲ ಮನನೊಂದಿದ್ದು, ಗೆಜ್ಜೆಗಿರಿ ಕ್ಷೇತ್ರ ಹಾಗೂ ಪೊಸರಡ್ಕ ಕ್ಷೇತ್ರದ ದೈವಗಳ ಪ್ರಾರ್ಥನೆ ಸಲ್ಲಿಸಲಾಗಿತ್ತು. ಆದರೆ, ಮೂವರು ಮಕ್ಕಳು ತಾವು ಮಾಡಿದ ಕೆಲಸ ಒಪ್ಪಿಕೊಂಡಿದ್ದು, ಮಕ್ಕಳ ತಪ್ಪನ್ನು ಮನ್ನಿಸುವಂತೆ ಪೋಷಕರು ಮನವಿ ಮಾಡಿದ್ದರು. ಹೀಗಾಗಿ ಇಲ್ಲಿಗೆ ಮುಕ್ತಾಯ ಗೊಳಿಸಲಾಗಿದೆ’ ಎಂದು ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.