ಉಜಿರೆ: ಮೆಸ್ಕಾಂನ ಉಜಿರೆ ಉಪವಿಭಾಗದ ಜನಸಂಪರ್ಕ ಸಭೆ ಗುರುವಾರ ಉಜಿರೆ ಶಾಖಾ ಕಚೇರಿಯಲ್ಲಿ ನಡೆಯಿತು.
ಬೆಳಾಲು ಫೀಡರ್‌ನಲ್ಲಿ ವಿದ್ಯುತ್ ಸರಬರಾಜು ಸಮಸ್ಯೆ ಇದೆ ಎಂದು ಬೆಳಾಲು ಪದ್ಮಗೌಡ ಅವರು ಅಧಿಕಾರಿಗಳ ಗಮನ ಸೆಳೆದರು.
ಬೆಳಾಲು ಫೀಡರ್‌ಗೆ ಕಕ್ಕಿಂಜೆ ಉಪಕೇಂದ್ರದಿಂದ ವಿದ್ಯುತ್ ಪೂರೈಕೆ ಮಾಡಲಾಗಿದ್ದು, ಇದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ದಾಮೋದರ ಸುರುಳಿ ಮಾತನಾಡಿ, ರೋಸ್ಟರ್ ಹಾಗೂ ಪವರ್‌ಕಟ್ ವೇಳಾಪಟ್ಟಿಯನ್ನು ಗ್ರಾಹಕರಿಗೆ ನೀಡಬೇಕು ಎಂದು ಕೋರಿದರು.
ಮುಂಡಾಜೆಯಲ್ಲಿ ಅರಳಿಕಟ್ಟೆ ಪರಿವರ್ತಕದ ಲೈನ್‌ನಲ್ಲಿ ಸುಮಾರು 100 ಮೀಟರ್ ವಿದ್ಯುತ್ ಕಂಬಗಳಿಲ್ಲದೆ ಅಪಾಯದ ಸ್ಥಿತಿ ಇದೆ ಎಂದು ಪುಷ್ಪರಾಜ ಶೆಟ್ಟಿ ಅಧಿಕಾರಿಗಳ ಗಮನ ಸೆಳೆದರು.
ಪವರ್‌ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ರಾವ್ ಆರೋಪಿಸಿದರು.
ಬೆಳಾಲಿನಲ್ಲಿ 110 ಕೆ.ವಿ. ಉಪಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಆಕ್ಷೇಪವಿದೆ ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದರು.
ಜನಸಂಪರ್ಕ ಸಭೆಯಲ್ಲಿ ಬಂದ ದೂರುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಮಂಗಳೂರು ಮೆಸ್ಕಾಂ ವೃತ್ತದ ಎಸ್.ಇ.ಕೃಷ್ಣರಾಜ, ಬೆಳ್ತಂಗಡಿ ಉಪವಿಭಾಗದ ಸಹಾಯಕ ಎಂಜಿನಿಯರ್ ಕ್ಲೆಮೆಂಟ್, ಉಪವಿಭಾಗದ ಪ್ರವೀಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.