ADVERTISEMENT

ಬಾಂಗ್ಲಾದೇಶಿ ಎಂದು ಆರೋಪಿಸಿ ವಲಸೆ‌ ಕಾರ್ಮಿಕನ ಮೇಲೆ ಹಲ್ಲೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 4:25 IST
Last Updated 12 ಜನವರಿ 2026, 4:25 IST
   

ಮಂಗಳೂರು: ಕೂಲಿ ಕೆಲಸಕ್ಕಾಗಿ ಜಾರ್ಖಂಡದಿಂದ ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿದ ಸಂಬಂಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಳೂರಿನ ಸಾಗರ್, ಧನುಷ್, ರತೀಶ್, ಮೋಹನ್ ಆರೋಪಿಗಳು.

ಜಾರ್ಖಂಡದ ದಿಲ್ ಜಾನ್ ಅನ್ಸಾರಿ ಎಂಬ ವ್ಯಕ್ತಿ ಕಳೆದ 10-15 ವರ್ಷಗಳಿಂದ ವರ್ಷದಲ್ಲಿ ಐದಾರು ತಿಂಗಳು ಕೂಲಿ ಕೆಲಸ ಮಾಡಲು ಮಂಗಳೂರಿಗೆ ಬರುತ್ತಿದ್ದರು. ನಾಲ್ವರು ಯುವಕರು ಅವರನ್ನು ತಡೆದು 'ನೀನು ಬಾಂಗ್ಲಾ ದೇಶದ ಪ್ರಜೆ, ನಿನ್ನ ಬಳಿ ಇರುವ ದಾಖಲೆ ತೋರಿಸು' ಎಂದು ಆರೋಪಿಸಿದ್ದಾರೆ. ಆ ವ್ಯಕ್ತಿಯನ್ನು ಕೆಟ್ಟ ಪದಗಳಲ್ಲಿ ಟೀಕಿಸಿ, ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ADVERTISEMENT

ಸ್ಥಳೀಯ ಒಬ್ಬರು ಹಿಂದೂ ಮಹಿಳೆ ಬಂದು ಆ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ. ವಲಸೆ ಕಾರ್ಮಿಕ ಭಯದಿಂದ ದೂರು ನೀಡಲು ಹಿಂದೇಟು ಹಾಕಿ, ಊರಿಗೆ ತೆರಳಿದ್ದು, ಸ್ಥಳೀಯರು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ದಿಲ್ ಜಾನ್ ವಿವರ ಕಲೆ ಹಾಕಿದ್ದು, ಅವರು ಭಾರತೀಯ ಎಂಬುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಕಲಂ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.