ADVERTISEMENT

ತೈಲ ಬೆಲೆ ಏರಿಕೆ: ತೆರಿಗೆ ಭಯೋತ್ಪಾದನೆ- ಶಾಸಕ ಖಾದರ್ ಟೀಕೆ

ತೈಲ ಬೆಲೆ ಏರಿಕೆ: ಶಾಸಕ ಖಾದರ್ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:14 IST
Last Updated 18 ಜೂನ್ 2021, 5:14 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ಪೆಟ್ರೋಲ್ ಬೆಲೆಯನ್ನು ₹ 100 ದಾಟಿಸಿದ್ದು ಬಿಜೆಪಿ ಸರ್ಕಾರದ ಐತಿಹಾಸಿಕ ಸಾಧನೆಯಾಗಿದೆ. ಕೋವಿಡ್ ಕಷ್ಟ ಕಾಲದಲ್ಲಿ ಇಂಧನ ಬೆಲೆ ಏರಿಕೆ ಮಾಡಿದ್ದು ಸರ್ಕಾರದ ತೆರಿಗೆ ಭಯೋತ್ಪಾದನೆಯಾಗಿದೆ ಎಂದು ಶಾಸಕ ಯು.ಟಿ. ಖಾದರ್ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೈಲದ ಮೇಲಿನ ತೆರಿಗೆ ಏರಿಸುವ ಮೂಲಕ ದೇಶದ ಜನರ ಮೇಲೆ ಬಿಜೆಪಿ ಸರ್ಕಾರ ತೆರಿಗೆ ದಾಳಿ ನಡೆಸುತ್ತಿದೆ. ತೈಲ ಬೆಲೆ ಏರಿಕೆಗೆ ಕೇಂದ್ರವು ಅಂತರರಾಷ್ಟ್ರೀಯ ಮಾರು ಕಟ್ಟೆಯ ನೆಪ ಹೇಳುತ್ತಿದೆ. ಇದೇ ಕಾರಣವಾಗಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲಿ ಯಾಕೆ ಇಂಧನ ಬೆಲೆ ಹೆಚ್ಚಳವಾಗಿಲ್ಲ. ಜನರ ದಿಕ್ಕು ತಪ್ಪಿಸಲು ಸರ್ಕಾರ ಸುಳ್ಳು ಹೇಳುತ್ತಿದೆ’ ಎಂದರು.

‘ಹಿಂದೆ ಯುಪಿಎ ಸರ್ಕಾರ ಇದ್ದಾಗ ಡೀಸೆಲ್ ಮೇಲೆ ₹ 3.46 ತೆರಿಗೆ ವಿಧಿಸಲಾಗುತ್ತಿತ್ತು. ಈಗ ಈ ತೆರಿಗೆ ₹ 31.80ಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ತೆರಿಗೆ ಇನ್ನೂ ಹೆಚ್ಚಾಗಿದೆ. ಜನರಿಂದ ಸುಲಿಗೆ ಮಾಡಿ, ಖಜಾನೆ ತುಂಬಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹೀಗೆ ಸಂಗ್ರಹವಾಗುವ ತೆರಿಗೆ ಶ್ರೀಮಂತರ ಸಾಲ ಮನ್ನಾಕ್ಕೆ ಬಳಕೆಯಾಗುತ್ತದೆಯೇ ವಿನಾ ಜನರಿಗೆ ಅಲ್ಲ’ ಎಂದು ಟೀಕಿಸಿದರು.

ADVERTISEMENT

ಕಾಂಗ್ರೆಸ್ ಮುಖಂಡರಾದ ಚಂದ್ರಹಾಸ ಕರ್ಕೇರ, ಮುಹಮ್ಮದ್ ಮೋನು, ಸಂತೋಷ್ ಶೆಟ್ಟಿ, ಆಲ್ವಿನ್ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.