ADVERTISEMENT

ಮೂಲ್ಕಿ: ಗಾಳಿ, ಮಳೆ ಹಲವೆಡೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 13:49 IST
Last Updated 13 ಜೂನ್ 2021, 13:49 IST
ಹಳೆಯಂಗಡಿ ಬಳಿಯಲ್ಲಿ ಪಿಡಬ್ಲೂಡಿ ರಸ್ತೆಯಲ್ಲಿ ತೆಂಗಿನ ಮರವೊಂದು ಬಿದ್ದು ಹಾನಿಯಾಗಿರುವುದು.
ಹಳೆಯಂಗಡಿ ಬಳಿಯಲ್ಲಿ ಪಿಡಬ್ಲೂಡಿ ರಸ್ತೆಯಲ್ಲಿ ತೆಂಗಿನ ಮರವೊಂದು ಬಿದ್ದು ಹಾನಿಯಾಗಿರುವುದು.   

ಮೂಲ್ಕಿ: ತಾಲ್ಲೂಕಿನಲ್ಲಿ ಭಾನುವಾರ ಬಿರುಸಿನ ಮಳೆ ಜೊತೆಗೆ ಗಾಳಿ ಬೀಸಿದ್ದು, ಕೆಲವೆಡೆ ಹಾನಿ ಉಂಟಾಗಿದೆ.

ಮೂಲ್ಕಿ ಬಸ್ ನಿಲ್ದಾಣದ ಹತ್ತಿರದ ಪೆಟ್ರೋಲ್ ಬಂಕ್ ಬಳಿಯ ಖಾಸಗಿ ಟವರ್‌ಗೆ ಹಾನಿಯಾಗಿದೆ. ಕೊಳಚಿಕಂಬಳ ರಸ್ತೆಯಲ್ಲಿ ಮರ ಬಿದ್ದು ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಹಳೆಯಂಗಡಿ - ಪಕ್ಷಿಕೆರೆ ಪಿಡಬ್ಲ್ಯೂಡಿ ರಸ್ತೆಯ ಬಳಿ ತೆಂಗಿನ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಮೂಲ್ಕಿ ರೈಲ್ವೆ ನಿಲ್ದಾಣ ಸಮೀಪ ಮರ ಬಿದ್ದು ವಿದ್ಯುತ್‌ ಪರಿವರ್ತಕ ಸಹಿತ 8 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಪಕ್ಷಿಕೆರೆ ಸಮೀಪದ ಪಂಜ ಬಳಿ ಮರ ಬಿದ್ದು, ಏಳು ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗಿದೆ. ಎಸ್ಕೋಡಿಯ ಬಳಿಯ ಮರಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

ADVERTISEMENT

ಗಾಳಿ ಮಳೆ, ಮನೆಗೆ ಹಾನಿ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಮೈರಾನಪಾದೆ ಎಂಬಲ್ಲಿ ಬೇಬಿ ಎಂಬುವರ ಮನೆ ಮೇಲೆ ಮರ‌ ಬಿದ್ದು ಹಾನಿಯಾಗಿದೆ. ಗ್ರಾಮ ಲೆಕ್ಕಾಧಿಕಾರಿ ನಾಗರಾಜ್, ಸ್ಥಳಿಯ ಪುರಸಭಾ ಸದಸ್ಯ ‌ಹರಿಪ್ರಸಾದ್ ಭಂಡಾರಿಬೆಟ್ಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಳ್ಳಾಲ ವ್ಯಾಪ್ತಿಯಲ್ಲಿ ಬೆಳಿಗ್ಗಿನಿಂದ ಸಂಜೆಯವರೆಗೂ ಧಾರಾಕಾರ ಮಳೆಯಾಗಿದೆ. ಸಮುದ್ರದ ಅಲೆಗಳಲ್ಲಿಯೂ ರಭಸ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.