ADVERTISEMENT

ಅಂತರರಾಷ್ಟ್ರೀಯ ಮಾನ್ಯತೆ ದೊರಕಿಸಿದ ಆಳ್ವ: ಉಮಾನಾಥ ಕೋಟ್ಯಾನ್

ಸ್ಕೌಟ್ಸ್-ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 4:32 IST
Last Updated 17 ಆಗಸ್ಟ್ 2022, 4:32 IST
ಜಾಂಬೂರಿಯ ಲಾಂಛನವನ್ನು ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸಿದರು. ಪಿ.ಜಿ.ಆರ್‌. ಸಿಂಧ್ಯಾ, ಡಾ.ಎಂ. ಮೋಹನ ಆಳ್ವ ಇದ್ದರು
ಜಾಂಬೂರಿಯ ಲಾಂಛನವನ್ನು ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸಿದರು. ಪಿ.ಜಿ.ಆರ್‌. ಸಿಂಧ್ಯಾ, ಡಾ.ಎಂ. ಮೋಹನ ಆಳ್ವ ಇದ್ದರು   

ಮೂಡುಬಿದಿರೆ: ಭಾರತ್ ಸ್ಕೌಟ್ಸ್-ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಯ ಸಹಯೋಗದಲ್ಲಿ ಡಿಸೆಂಬರ್‌ನಲ್ಲಿ ಇಲ್ಲಿನ ಸ್ಕೌಟ್ಸ್-ಗೈಡ್ಸ್ ಒಂದು ವಾರ ನಡೆಯುವ ‘ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿ’ಯ ಕಚೇರಿಯನ್ನು ಇಲ್ಲಿನ ಕನ್ನಡ ಭವನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಉದ್ಘಾಟಿಸಿ ಬಳಿಕ ಲಾಂಛನ ಬಿಡುಗಡೆಗೊಳಿಸಿದರು.

ಜಾಂಬೂರಿಗೆ ಸರ್ಕಾರದಿಂದ ಸರ್ವ ನೆರವು ನೀಡಲಾಗುವುದು. ಡಾ. ಎಂ. ಮೋಹನ ಆಳ್ವ ಅವರು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೂಡುಬಿದಿರೆ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ ಎಂದು ಕೋಟ್ಯಾನ್‌ ಶ್ಲಾಘಿಸಿದರು.

ಸ್ಕೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಘಟಕವು ಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಕೌಟ್ಸ್-ಗೈಡ್ಸ್ ಪ್ರೇರಣೆಯಿಂದ ಮಕ್ಕಳು ಸತ್ಪ್ರಜೆಗಳಾಗಿ ಬೆಳೆಯುತ್ತಾರೆ ಎಂದರು.

ADVERTISEMENT

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಜಾಂಬೂರಿಗೆ ಅಂದಾಜು ₹30 ಕೋಟಿ ಖರ್ಚು ವೆಚ್ಚ ತಗುಲಲಿದ್ದು, ಪ್ರತಿಯೊಬ್ಬರು ಸಂಘಟಿತ ಮನೊಭಾವದಿಂದ ಒಟ್ಟಾಗಬೇಕು ಎಂದರು.

ಸ್ಕೌಟ್ಸ್‌–ಗೈಡ್ಸ್‌ನ ಏಷ್ಯಾ ಫೆಸಿಫಿಕ್ ಪ್ರಾದೇಶಿಕ ನಿರ್ದೇಶಕ ಪ್ರಸನ್ನ ಶ್ರೀವತ್ಸವ, ರಾಷ್ಟ್ರೀಯ ಕಾರ್ಯಕಾರಿ ನಿರ್ದೇಶಕ ಕೃಷ್ಣಸ್ವಾಮಿ ಆರ್, ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ಹೆಚ್ಚುವರಿ ಅಂತರರಾಷ್ಟ್ರೀಯ ಆಯಕ್ತ ಮಧುಸೂದನ್, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ, ಉದ್ಯಮಿ ಗಫೂರ್, ಮಹೇಂದ್ರ ವರ್ಮ ಇದ್ದರು. ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್ ವಂದಿಸಿದರು, ಸ್ಥಳೀಯ ಸಂಸ್ಥೆ ಸಹಕಾರ್ಯದರ್ಶಿ ನವೀನ್‌ಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.