ADVERTISEMENT

ಮೂಡುಬಿದಿರೆ | ₹ 5 ಕೋಟಿ ವೆಚ್ಚದಲ್ಲಿ ಜೈನಮಠದ ಜೀರ್ಣೋದ್ಧಾರ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:19 IST
Last Updated 29 ಆಗಸ್ಟ್ 2025, 4:19 IST
ಸಾವಿರ ಕಂಬದ ಬಸದಿಗೆ ಕೊಡುಗೆಯಾಗಿ ನೀಡಲಾದ ಯಾಂತ್ರಿಕ ಆನೆ
ಸಾವಿರ ಕಂಬದ ಬಸದಿಗೆ ಕೊಡುಗೆಯಾಗಿ ನೀಡಲಾದ ಯಾಂತ್ರಿಕ ಆನೆ    

ಮೂಡುಬಿದಿರೆ: ಇಲ್ಲಿನ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯ ಪಟ್ಟಾಭಿಷೇಕದ ರಜತವರ್ಷದ ಅಂಗವಾಗಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಜೈನಮಠದ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಸುಮಾರು ₹ 10 ಲಕ್ಷ ವೆಚ್ಚದಲ್ಲಿ ವಿವಿಧ ಗ್ರಂಥಗಳ 400 ಓಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ವಿಕ್ರಮ ಶೆಟ್ಟಿ, ಬೆಟ್ಗೇರಿ ಬಸದಿಗಳ ಜೀರ್ಣೋದ್ಧಾರ ಪ್ರಗತಿ ಹಂತದಲ್ಲಿವೆ. ಸಾವಿರ ಕಂಬ ಬಸದಿಯ ಚಾವಣಿಯ ಮೂರನೇ ಅಂತಸ್ತಿನ ದುರಸ್ತಿ ನಡೆಯಲಿದೆ ಎಂದರು.

ಜೈನಮಠದ ಸ್ವಾಮೀಜಿಗೆ ಗುರುದೀಕ್ಷೆ ನೀಡಿದ ಗುರುಗಳನ್ನು ಸ್ಮರಿಸಲು ಆ.29ರಂದು ಮಧ್ಯಾಹ್ನ 3 ಗಂಟೆಗೆ ಗುರುವಂದನೆ ಕಾರ್ಯಕ್ರಮ ಸಾವಿರ ಕಂಬದ ಬಸದಿಯಲ್ಲಿ ನಡೆಯಲಿದೆ. ಆಚಾರ್ಯ 108 ಗುಲಾಬ್ ಭೂಷಣ ಮಹಾರಾಜರು ಆಶೀರ್ವಚನ ನೀಡಲಿದ್ದಾರೆ. ಜೈನ ಮಠದ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ADVERTISEMENT

ಯಾಂತ್ರಿಕ ಆನೆ ಲೋಕಾರ್ಪಣೆ: ಪೇಟಾ ಇಂಡಿಯ ಸಂಸ್ಥೆ ಕೊಡುಗೆಯಾಗಿ ನೀಡಿದ ಯಾಂತ್ರಿಕ ಆನೆಯನ್ನು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅರುಣ್ ಜೈನ್ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮಿತ್ ಜೈನ್, ಮಣೀಂದ್ರ ಜೈನ್, ನಿವೇದಿತಾ ಜೈನ್ ಭಾಗವಹಿಸಲಿದ್ದಾರೆ.

ಬಳಿಕ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.