ADVERTISEMENT

ಎಂಆರ್‌ಪಿಎಲ್‌: 115 ಮಂದಿ ರಕ್ತದಾನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 2:41 IST
Last Updated 16 ಮಾರ್ಚ್ 2024, 2:41 IST
ಎಂಆರ್‌ಪಿಎಲ್ ವಾರ್ಷಿಕೋತ್ಸವದ ಮುನ್ನಾದಿನ ರಕ್ತದಾನ ಶಿಬಿರ ನಡೆಯಿತು
ಎಂಆರ್‌ಪಿಎಲ್ ವಾರ್ಷಿಕೋತ್ಸವದ ಮುನ್ನಾದಿನ ರಕ್ತದಾನ ಶಿಬಿರ ನಡೆಯಿತು   

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್‌) ತನ್ನ ವಾರ್ಷಿಕೋತ್ಸವ ಮುನ್ನಾ ದಿನವಾದ ಶುಕ್ರವಾರ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 115ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

ರಿಫೈನರಿ ನಿರ್ದೇಶಕ ಸಂಜಯ್ ವರ್ಮಾ, ವಿಜಿಲೆನ್ಸ್ ಅಧಿಕಾರಿ ಗಣೇಶ್ ಎಸ್. ಭಟ್, ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಸೆಲ್ವಿ ಇದ್ದರು. ಎಂಆರ್‌ಪಿಎಲ್‌ನ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರು ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT