ADVERTISEMENT

ವಿದ್ಯಾ ಮುಡಿಗೆ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಕಿರೀಟ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:41 IST
Last Updated 17 ಡಿಸೆಂಬರ್ 2025, 7:41 IST
ಗ್ರ್ಯಾಂಡ್ ವಿನ್ನರ್ ಪ್ರಶಸ್ತಿ ಪಡೆದ ವಿದ್ಯಾ ಸಂಪತ್
ಗ್ರ್ಯಾಂಡ್ ವಿನ್ನರ್ ಪ್ರಶಸ್ತಿ ಪಡೆದ ವಿದ್ಯಾ ಸಂಪತ್   

ಮಂಗಳೂರು: ಫಿಲಿಫೈನ್ಸ್‌ನಲ್ಲಿ ಈಚೆಗೆ ನಡೆದ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾ ಅವರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಂಗಳವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಲು ಹೆಮ್ಮೆಯಾಗಿತ್ತು. 22 ದೇಶಗಳ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗ್ರ್ಯಾಂಡ್ ವಿನ್ನರ್‌ ಆಗಿ ನನ್ನ ಹೆಸರನ್ನು ಘೋಷಿಸಿದಾಗ ಆದ ಸಂತಸವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದು’ ಎಂದರು.

‘ಹಿಂದೆ ಮಿಸೆಸ್ ಇಂಡಿಯಾ ಆಸ್ಟ್ರಲ್ ಕರ್ನಾಟಕ ರನ್ನರ್ ಪ್ರಶಸ್ತಿಯನ್ನು ಪಡೆದಿದ್ದೆ. ನಾನು ಸೂಪರ್ ಮಾರ್ಕೆಟ್ ನಡೆಸುತ್ತಿದ್ದೇನೆ. ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹವನ್ನು ಪ್ರೋತ್ಸಾಹಿಸಿದವರು ನನ್ನ ಪತಿ. ಸ್ಪರ್ಧೆಯ ಸಿದ್ಧತೆಗೆ ಆಸ್ಟ್ರಲ್ ಪೇಜೆಂಟ್ಸ್ ಪ್ರಾದೇಶಿಕ ನಿರ್ದೇಶಕ ದೀಪಕ್ ಗಂಗೂಲಿ ಮಾರ್ಗದರ್ಶನ ನೀಡಿದರು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.