ADVERTISEMENT

ಮೂಡುಬಿದಿರೆ: ಕಂಬಳದ ಕೋಣ ಚೀಂಕ್ರ ಸಾವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 6:13 IST
Last Updated 12 ಜೂನ್ 2025, 6:13 IST
ಕಂಬಳ ಕೋಣ ಚೀಂಕ್ರ 
ಕಂಬಳ ಕೋಣ ಚೀಂಕ್ರ    

ಮೂಡುಬಿದಿರೆ: ಬೆಳುವಾಯಿ ಪೆರೋಡಿಗುತ್ತು ಕೌಶಿಕ್ ದಿನಕರ ಶೆಟ್ಟಿ ಅವರ ಓಟದ ಕೋಣ ಚೀಂಕ್ರ ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟಿದೆ.

ಮಂಗಳವಾರ ಬೆಳಿಗ್ಗೆಯಿಂದ ಕೋಣ ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಔಷಧ ನೀಡಿದರು ಫಲಿಸದೆ ಸಂಜೆ ಹೊತ್ತಿಗೆ ಸಾವನ್ನಪ್ಪಿದೆ.

ಬೈಂದೂರಿನಿಂದ ಈ ಕೋಣವನ್ನು ಖರೀದಿಸಲಾಗಿತ್ತು. ಅಭಿಮಾನಿಗಳಿಗೆ ಶೇಕ್ ಹ್ಯಾಂಡ್ ಮಾಡುತ್ತಿದ್ದ ವಿಶೇಷ ಕೋಣ ಇದಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ಸುಮಾರು 13 ಕಂಬಳಗಳಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ಪ್ರಶಸ್ತಿ ಪಡೆದಿತ್ತು. ಕೋಣಗಳ ಮಾಲೀಕ ಕೌಶಿಕ್ ಶೆಟ್ಟಿ ಹಾಗೂ ಕಂಬಳದ ಅಭಿಮಾನಿಗಳ ಸಮಕ್ಷಮದಲ್ಲಿ ಮನೆ ಆವರಣದಲ್ಲಿ ಮಂಗಳವಾರ ರಾತ್ರಿ ಕೋಣದ ಅಂತ್ಯಕ್ರಿಯೆ ನಡೆಸಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.