ADVERTISEMENT

ಮಂಗಳೂರು | 3 ರೈಲುಗಳ ಗಮ್ಯ ಸ್ಥಳ ಮೊಟಕು: ಕೊಂಕಣ ರೈಲ್ವೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 5:47 IST
Last Updated 31 ಆಗಸ್ಟ್ 2025, 5:47 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಮಂಗಳೂರು: ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನ (ಸಿಎಸ್‌ಎಂಟಿ) 12 ಮತ್ತು 13ನೇ ಸಂಖ್ಯೆಯ ಪ್ಲ್ಯಾಟ್‌ಫಾರ್ಮ್‌ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ ಮಂಗಳೂರು–ಮುಂಬೈ ರೈಲು ಸೇರಿದಂತೆ ರೈಲುಗಳ ಗಮ್ಯ ಸ್ಥಳವನ್ನು ಇದೇ 31ರ ವರೆಗೆ ಮೊಟಕುಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ. 

ADVERTISEMENT

ಮಂಗಳೂರು ಜಂಕ್ಷನ್‌ನಿಂದ ಸಿಎಸ್‌ಎಂಟಿಗೆ ತೆರಳುವ 12134 ಸಂಖ್ಯೆಯ ರೈಲು ಥಾಣೆ ನಿಲ್ದಾಣದ ವರೆಗೆ ಮಾತ್ರ ಪ್ರಯಾಣಿಸಲಿದೆ. ಗೋವಾದ ಮಡಗಾಂವ್‌ ಜಂಕ್ಷನ್‌ನಿಂದ ಸಿಎಸ್‌ಎಂಟಿಗೆ ಸಾಗುವ 22120 ಸಂಖ್ಯೆಯ ತೇಜಸ್ ಎಕ್ಸ್‌ಪ್ರೆಸ್‌ ಮತ್ತು 12052 ಸಂಖ್ಯೆಯ ಜನ್‌ ಶತಾಬ್ದಿ ರೈಲು ದಾದರ್ ನಿಲ್ದಾಣದ ವರೆಗೆ ಮಾತ್ರ ತೆರಳಲಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.