ಕಾಸರಗೋಡು: ರಾಜ್ಯ ಸರ್ಕಾರ ದುರಾಡಳಿತೆ ನಡೆಸುತ್ತಿದೆ ಎಂದು ಆರೋಪಿಸಿ ಎನ್.ಡಿ.ಎ. ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ನಡೆಯುತ್ತಿರು ರಾಜ್ಯಮಟ್ಟದ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ನಗರದ ತಾಳಿಪಡ್ಪು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉದ್ಘಾಟಿಸಿದರು.
ರಾಜ್ಯದಲ್ಲಿ ರಾಜ್ಯಪಾಲರಿಗೂ ರಕ್ಷಣೆ ಇಲ್ಲದ ಸ್ಥಿತಿ ಇದೆ. ಇಲ್ಲಿ ಸಾಮಾನ್ಯ ನಾಗರಿಕ ಸುರಕ್ಷಿತ ಜೀವನ ನಡೆಸುವುದು ಕನಸಿನ ಮಾತು ಎಂದರು.
ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್, ಮುಖಂಡರಾದ ತುಷಾರ್ ವೆಳ್ಳಾಪಳ್ಳಿ, ಪಿ.ಕೆ.ಕೃಷ್ಣದಾಸ್, ಕುಮ್ಮನಂ ರಾಜಶೇಖರ್, ಸಿ.ಕೆ.ಪದ್ಮನಾಭನ್, ಸಿ.ಕೆ.ಜಾನು, ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.