ಮೂಡುಬಿದಿರೆ: ಭಾರೀ ಗಾಳಿ ಮಳೆಗೆ ನೆಲ್ಲಿಕಾರು ಗ್ರಾಮದ ಬೋರುಗುಡ್ಡೆ ಜನತಾಕಾಲೊನಿಯಲ್ಲಿ ಬುಧವಾರ ರಾತ್ರಿ ಮನೆ ಕುಸಿದು ಬಿದ್ದು, ಮನೆಯಲ್ಲಿದ್ದ ಮಹಿಳೆ ಗೋಪಿ (65) ಮೃತಪಟ್ಟಿದ್ದಾರೆ.
ಗೋಪಿ ಮನೆಯಲ್ಲಿದ್ದರೆ ನಾಲ್ವರು ಗಂಡು ಮಕ್ಕಳು ಮನೆ ಹೊರಗಡೆ ಮಳೆ ರಕ್ಷಣೆಗೆ ಪ್ಲಾಸ್ಟಿಕ್ ಟರ್ಪಾಲು ಕಟ್ಟುತ್ತಿದ್ದರು. ಆಗ ಗೋಡೆ ಉರುಳಿ ದುರಂತ ಸಂಭವಿಸಿದೆ.
ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.