ಮೂಲ್ಕಿ: ಧಾರ್ಮಿಕ ನಂಬಿಕೆಯನ್ನು ದೇವಸ್ಥಾನದ ಸಾನ್ನಿಧ್ಯದಲ್ಲಿ ಉಳಿಸಿದಂತೆ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನದೊಂದಿಗೆ ಬ್ರಹ್ಮಕಲಶ ನಡೆಯುವಾಗ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಬೇಕು ಎಂದು ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಕಿನ್ನಿಗೋಳಿ ಬಳಿಯ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯ ಪ್ರವೇಶಿಸಿ ಗುಹಾ ತೀರ್ಥಸ್ನಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೆಲ್ಲಿತೀರ್ಥ ಪವಿತ್ರ ಗುಹಾಪ್ರವೇಶ, ಗುಹಾತೀರ್ಥ ಸ್ನಾನ ಕಾರ್ಯಕ್ರಮವು ತುಲಾ ಸಂಕ್ರಮಣದ ಸಂದರ್ಭ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳೊಂದಿಗೆ ನಡೆಯಿತು. ಕ್ಷೇತ್ರದ ಸೋಮನಾಥೇಶ್ವರ, ಮಹಾಗಣಪತಿ ದೇವರು ಹಾಗೂ ಜಾಬಾಲಿ ಮಹರ್ಷಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಕ್ಷೇತ್ರದ ವೆಂಕಟೇಶ್ ತಂತ್ರಿ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್.ವಿ.ವೆಂಕಟರಾಜ್ ಭಟ್, ಪ್ರಸನ್ನ ಭಟ್, ಎನ್.ವಿ. ಜಿ.ಕೆ.ಭಟ್, ಎನ್.ವಿ.ರಮೇಶ್ ಭಟ್, ಗಣಪತಿ ಭಟ್, ಉದ್ಯಮಿ ಶ್ರೀಪತಿ ಭಟ್, ರಾಜಗೋಪಾಲ ಆಚಾರ್ಯ ಕೋಟೇಶ್ವರ, ವಾದೀಶ್ ಭಟ್, ಆನಂದ ಕಾವ, ದೀಪ್ ಕಿರಣ್, ಕೃಷ್ಣಪ್ಪ ಪೂಜಾರಿ, ಸುಂದರಪೂಜಾರಿ ಭಾಗವಹಿಸಿದ್ದರು.