ADVERTISEMENT

ನೆಟ್ಟಣ ರೈಲು ನಿಲ್ದಾಣ: ಹಳಿಗೆ ಉರುಳಿದ ಕ್ರೇನ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:35 IST
Last Updated 18 ಡಿಸೆಂಬರ್ 2025, 6:35 IST
ನೆಟ್ಟಣ ರೈಲು ನಿಲ್ದಾಣದಲ್ಲಿ ಹಳಿಗೆ ಉರುಳಿದ ಕ್ರೇನ್‌
ನೆಟ್ಟಣ ರೈಲು ನಿಲ್ದಾಣದಲ್ಲಿ ಹಳಿಗೆ ಉರುಳಿದ ಕ್ರೇನ್‌   

ಪ್ರಜಾವಾಣಿ ವಾರ್ತೆ

ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ವೇಳೆ ಬುಧವಾರ ಅಡಿಭಾಗ ಕುಸಿದು, ಕ್ರೇನ್ ರೈಲ್ವೆ ಹಳಿಗೆ ಉರುಳಿ ಬಿದ್ದಿದೆ.

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಫ್ಲ್ಯಾಟ್ ಫಾರ್ಮ್‌ನಲ್ಲಿ ಕೆಲಸಕ್ಕಾಗಿ ಕ್ರೇನ್ ತರಿಸಲಾಗಿತ್ತು. ಕೆಲಸ ಮಾಡುತ್ತಾ ಕ್ರೇನ್‌ ಫ್ಲ್ಯಾಟ್ ಫಾರ್ಮ್‌ನಲ್ಲಿ ಅಂಚಿಗೆ ತಲುಪಿತ್ತು. ಈ ವೇಳೆ ಫ್ಲ್ಯಾಟ್ ಫಾರ್ಮ್‌ನ ಬದಿ ಕುಸಿದಿದ್ದರಿಂದ ನಿಯಂತ್ರಣ ತಪ್ಪಿ ಕ್ರೇನ್ ರೈಲು ಹಳಿಗೆ ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಕ್ರೇನ್ ಆಪರೇಟರ್ ಗಾಯಗೊಂಡಿದ್ದಾರೆ. ಬಳಿಕ ಎರಡು ಕ್ರೇನ್‌ಗಳನ್ನು ಸ್ಥಳಕ್ಕೆ ತರಿಸಿಕೊಂಡು, ಹಳಿಯಿಂದ ಕ್ರೇನ್‌ ಅನ್ನು ಮೇಲಕ್ಕೆತ್ತಲಾಯಿತು. 

ADVERTISEMENT

ನಿಲ್ದಾಣದಲ್ಲಿ ರೈಲು ವಿದ್ಯುತ್ ಮಾರ್ಗ ಹಾದು ಹೋಗಿದೆ. ಅವಘಡ ಸಂಭವಿಸಿದಾಗಿ ರೈಲು ನಿಲ್ದಾಣದಲ್ಲಿ ಇತರೆ ರೈಲು, ಗೂಡ್ಸ್ ವಾಹನ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.