ADVERTISEMENT

ಮಾಲ್ಟಾದಿಂದ ನವಮಂಗಳೂರು ಬಂದರಿಗೆ ಬಂದ ಐಷಾರಾಮಿ ಹಡಗು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 6:47 IST
Last Updated 29 ನವೆಂಬರ್ 2022, 6:47 IST
ಮಂಗಳೂರು ಎನ್‌ಎಂಪಿಎಗೆ ಸೋಮವಾರ ಬಂದಿದ್ದ ಐಷಾರಾಮಿ ಹಡಗು
ಮಂಗಳೂರು ಎನ್‌ಎಂಪಿಎಗೆ ಸೋಮವಾರ ಬಂದಿದ್ದ ಐಷಾರಾಮಿ ಹಡಗು   

ಮಂಗಳೂರು: ಪ್ರಸಕ್ತ ಋತುವಿನ ಮೊದಲ ಐಷಾರಾಮಿ ಹಡಗು (ಕ್ರೂಸ್‌) ಸೋಮವಾರ ನವಮಂಗಳೂರು ಬಂದರಿನಲ್ಲಿ ಲಂಗರು ಹಾಕಿದೆ. ಮಾಲ್ಟಾದಿಂದ ಬಂದಿದ್ದ ‘ಎಂಎಸ್‌ ಯುರೋಪ–2’ ಹೆಸರಿನ ಹಡಗಿನಲ್ಲಿ 271 ಪ್ರಯಾಣಿಕರು ಹಾಗೂ 373 ಸಿಬ್ಬಂದಿ ಮುಂಜಾನೆ 6.30ಕ್ಕೆ ಇಲ್ಲಿ ಬಂದಿಳಿದರು.

ಅತಿಥಿಗಳನ್ನು ಸ್ವಾಗತಿಸಲು ಎನ್‌ಎಂಪಿಎದಲ್ಲಿ 11 ಎಮಿಗ್ರೇಶನ್‌ ಹಾಗೂ ನಾಲ್ಕು ಕಸ್ಟಮ್ಸ್‌ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಪ್ರಯಾಣಿಕರಿಗಾಗಿ ಆರು ಬಸ್‌, 15 ಪೂರ್ವಪಾವತಿ ಟ್ಯಾಕ್ಸಿಗಳ ವ್ಯವಸ್ಥೆ ಮಾಡಲಾಗಿತ್ತು. ಆಯುಶ್‌ ಇಲಾಖೆಯ ವತಿಯಿಂದ ಧ್ಯಾನ ಕೇಂದ್ರ ಹಾಗೂ ಭಾರತೀಯ ಪುರಾಣಗಳ ಮಾಹಿತಿ ನೀಡುವಂಥ ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಹಡಗಿನಲ್ಲಿ ಬಂದಿದ್ದ ಪ್ರವಾಸಿಗರು ಸೇಂಟ್‌ ಅಲೋಶಿಯಸ್‌ ಕಾಲೇಜು, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನ, ಮಂಗಳೂರಿನ ಮಾರುಕಟ್ಟೆ, ಉಡುಪಿ ಕೃಷ್ಣ ಮಠ, ಮೂಡುಬಿದಿರೆಯ ಸಾವಿರ ಕಂಬದ ಬಸದಿ ಫಿಜಾ ಮಾಲ್‌ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು. ಸಂಜೆ 3 ಗಂಟೆಗೆ ಹಡಗು ಇಲ್ಲಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತು.

ADVERTISEMENT

ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಪ್ರವಾಸಿ ಹಡುಗಳ ಭೇಟಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ದೀರ್ಘ ಅವಧಿಯ ಬಳಿಕ, ಈ ಋತುವಿನಲ್ಲಿ ಮತ್ತೆ ವಿದೇಶಿ ಪ್ರಯಾಣಿಕರು ನಗರಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.