ಬೆಳ್ತಂಗಡಿ: ಅಳದಂಗಡಿಯ ಹಿಂದೂ ಆಲಡ್ಕ ಕ್ಷೇತ್ರ ಸಂಘಟನೆಯು ವೃದ್ಧರೊಬ್ಬರಿಗೆ ವೇಣೂರು ಬಳಿಯ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಆಶ್ರಯ ಕಲ್ಪಿಸಿದೆ.
ಬಡಗಕಾರಂದೂರು ಗ್ರಾಮದ ಕೆದ್ದು ಬಳಿ ಬಾಡ ಎಂಬ ನಿರ್ಗತಿಕ ವೃದ್ಧ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟೆ ಮುಂಭಾಗ, ಮರಗಳ ಕೆಳಗೆ ಇರುತ್ತಿದ್ದರು. ಅವರಿಗೆ ಸ್ಥಳೀಯರು ಅನ್ನ, ಆಹಾರ ನೀಡುತ್ತಿದ್ದರು.
ಕೆಲ ದಿನಗಳಿಂದ ಅಶಕ್ತರಾಗಿದ್ದ ಅವರಿಗೆ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಅಳದಂಗಡಿ ಸಮಾಜ ಸೇವಾ ಸಂಘಟನೆಯು ಅಳದಂಗಡಿ ಗ್ರಾಮ ಪಂಚಾಯಿತಿ, ವೇಣೂರು ಪೋಲೀಸ್ ಠಾಣೆಗೆ ಮಾಹಿತಿ ನೀಡಿ ವೀರಕೇಸರಿ ಬಳಂಜದ ಆಂಬುಲೆನ್ಸ್‌ನಲ್ಲಿ ಕರೆದೊಯ್ದು ವೇಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿದರು. ಚಿಕಿತ್ಸೆ ಬಳಿಕ ಹೊನ್ನಯ್ಯ ಕುಲಾಲ್ ಕಾಟಿಪಳ್ಳ ಅವರ ವೇಣೂರು ಗುಂಡೂರಿಯ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ಸೇರಿಸಿದರು.
ಸಂಘಟನೆಯ ಅಧ್ಯಕ್ಷ ದೇವದಾಸ್ ಸಾಲ್ಯಾನ್, ಅಳದಂಗಡಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಜೆ., ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಆಚಾರ್ಯ ಮಿತ್ತರೋಡಿ, ಅಳದಂಗಡಿ ಆಟೊ ಚಾಲಕ–ಮಾಲೀಕರ ಸಂಘದ ಅಧ್ಯಕ್ಷ ಕೊರಗಪ್ಪ, ಸಾಮಾಜಿಕ ಕಾರ್ಯಕರ್ತೆ ಹರಿಣಿ ಲಕ್ಷ್ಮಣ ಪೂಜಾರಿ, ಕೀರ್ತನ್ ಸಹಕರಿಸಿದರು
ವೃದರ್ಧರ ಸಂಬಂಧಿಕರು ಇದ್ದರೆ ವೇಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹೊನ್ನಯ್ಯ ಕುಲಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.