ADVERTISEMENT

ಓಪನ್ ಸೀ ಈಜು ಸ್ಪರ್ಧೆ 26ರಂದು

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 21:33 IST
Last Updated 19 ಜನವರಿ 2024, 21:33 IST

ಮಂಗಳೂರು: ನಗರದ ಮಂಗಳೂರು ಸರ್ಫ್ ಕ್ಲಬ್ ಸಂಸ್ಥೆಯು ವಿ ಒನ್‌ ಅಕ್ವಾ ಸೆಂಟರ್‌ ಮತ್ತು ಡೆಕಾಥ್ಲಾನ್ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಓಪನ್ ಸೀ ಈಜು ಸ್ಪರ್ಧೆ ‘ಡೆನ್‌ ಡೆನ್ ಸ್ವಿಮ್‌’ ಇದೇ 26ರಂದು ತಣ್ಣೀರುಬಾವಿ ಸಮೀಪದ ಮಂಗಳೂರು ಸರ್ಫ್ ಕ್ಲಬ್ ಬೀಚ್‌ನಲ್ಲಿ ನಡೆಯಲಿದೆ.

ವೈಯಕ್ತಿಕ ವಿಭಾಗಗಳಲ್ಲಿ 1979ರಿಂದ 1993ರ ಅವಧಿಯಯಲ್ಲಿ ಜನಿಸಿದವರಿಗೆ, 1994ರಿಂದ 2005ರ ಅವಧಿಯಲ್ಲಿ ಜನಿಸಿದವರಿಗೆ ಮತ್ತು 2006ರಿಂದ 2008ರ ಅವಧಿಯಲ್ಲಿ ಜನಿಸಿದವರಿಗೆ 1.5 ಹಾಗೂ 3 ಕಿಲೊಮೀಟರ್ಸ್‌, 2012 ಅಥವಾ 2013ರಲ್ಲಿ ಜನಿಸಿದವರಿಗೆ 500 ಮೀಟರ್ಸ್‌, 2009ರಿಂದ 2011ರ ಅವಧಿ ಮತ್ತು 1978ರೊಳಗೆ ಜನಿಸಿದವರಿಗೆ 1.5 ಕಿಲೊಮೀಟರ್ಸ್ ಸ್ಪರ್ಧೆ ಇರುತ್ತದೆ. 10 ವರ್ಷದೊಳಗಿನವರಿಗಾಗಿ 250 ಮೀಟರ್ಸ್‌ ಫನ್ ಸ್ವಿಮ್ ಕೂಡ ನಡೆಯಲಿದೆ.

‘₹ 1,000 ಪ್ರವೇಶ ಶುಲ್ಕ ಇದ್ದು, http://www.surfmangalore.com/dds ತಾಣದ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ದಿಗಳು ಬೆಳಿಗ್ಗೆ 6 ಗಂಟೆಯಿಂದ ಸ್ಥಳದಲ್ಲಿ ಇರಬೇಕು’ ಎಂದು ಮಂಗಳೂರು ಸರ್ಫ್ ಕ್ಲಬ್ ಅಧ್ಯಕ್ಷ ಚಿರಾಗ್ ಶಂಭು ತಿಳಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.