ADVERTISEMENT

ಎಸ್.ಡಿ.ಎಂ. ಕಾಲೇಜಿನಲ್ಲಿ 'ಭತ್ತದೋತ್ಸಾಹ’ಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 6:58 IST
Last Updated 4 ಜುಲೈ 2022, 6:58 IST
 ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   

ಉಜಿರೆ: ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶನಿವಾರ ಪಾಡ್ದನ ಹಾಡುವ ಜೊತೆಗೆ ನೇಜಿ ನಾಟಿ ಮಾಡಿ ಉತ್ಸಾಹ ಮೆರೆದರು.

ವಿದ್ಯಾರ್ಥಿಗಳಲ್ಲಿ ಕೃಷಿ ಬಗ್ಗೆ ಒಲವು ಮೂಡಿಸಲು ಕಾರ್ಯಕ್ರಮ ಪ್ರಾರಂಭಿಸಲಾಗಿದ್ದು, 205 ಪಾಲಿ ಬ್ಯಾಗ್‌ಗಳಲ್ಲಿ 30 ದಿನ ಬೆಳೆದಿರುವ ನೇಜಿಯನ್ನು ವಿದ್ಯಾರ್ಥಿಗಳು ನಾಟಿ ಮಾಡುತ್ತಾರೆ. ನೂರು ದಿನಗಳ ವರೆಗೆ ಅವುಗಳ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಗಮನಿಸುತ್ತಾರೆ ಕಜೆ ಮತ್ತು ಜಯಾ ತಳಿಯ ನೇಜಿಯನ್ನು ಕಟಾವು ಹಂತದ ವರೆಗೂ ವಿದ್ಯಾರ್ಥಿಗಳೆ ನೋಡಿಕೊಳ್ಳುತ್ತಾರೆ ಎಂದು ಉಪನ್ಯಾಸಕರು ತಿಳಿಸಿದರು.

ಸಸ್ಯ ವಿಜ್ಞಾನ ವಿಭಾಗದ ‘ಸಸ್ಯ ಸೌರಭ’ ಸಂಘದ 205 ವಿದ್ಯಾರ್ಥಿಗಳು ಭಾಗವಹಿಸಿದರು.

ADVERTISEMENT

ಪ್ರಾಂಶುಪಾಲ ಡಾ. ಪಿ.ಯನ್. ಉದಯಚಂದ್ರ, ಡೀನ್ ಡಾ. ವಿಶ್ವನಾಥ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕುಮಾರ ಹೆಗ್ಡೆ ಇದ್ದರು. ವಿದ್ಯಾರ್ಥಿನಿ ಪ್ರಜ್ಞಾ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.