ADVERTISEMENT

ಬಿಲ್ಲವ ಸಂಘಟನೆಗಳಿಂದ ಪ್ರತಿಭಟನೆ

ರಾಮಕ್ಷತ್ರಿಯ ಸೇವಾ ಸಂಘದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 7:01 IST
Last Updated 4 ಜುಲೈ 2022, 7:01 IST
ಪುತ್ತೂರಿನಲ್ಲಿ ನಡೆದ ರಾಮಕ್ಷತ್ರಿಯ ಸೇವಾ ಸಂಘ ಹಾಗೂ ಮಹಿಳಾ ವೃಂದದ ವಾರ್ಷಿಕೋತ್ಸವವನ್ನು ಅಬಕಾರಿ ಇಲಾಖೆ ಅಧೀಕ್ಷಕ ವಿನೋದ್ ಕುಮಾರ್  ಉದ್ಘಾಟಿಸಿದರು.
ಪುತ್ತೂರಿನಲ್ಲಿ ನಡೆದ ರಾಮಕ್ಷತ್ರಿಯ ಸೇವಾ ಸಂಘ ಹಾಗೂ ಮಹಿಳಾ ವೃಂದದ ವಾರ್ಷಿಕೋತ್ಸವವನ್ನು ಅಬಕಾರಿ ಇಲಾಖೆ ಅಧೀಕ್ಷಕ ವಿನೋದ್ ಕುಮಾರ್  ಉದ್ಘಾಟಿಸಿದರು.   

ಬೆಳ್ತಂಗಡಿ: ನಾರಾಯಣ ಗುರುಗಳ ಪಠ್ಯವನ್ನು 10 ನೇ ತರಗತಿಯ ಸಮಾಜ ವಿಜ್ಞಾನದಿಂದ ತೆಗೆದು ಹಾಕುವ ಮೂಲಕ ಗುರು ಹಾಗೂ ಅನುಯಾಯಿಗಳನ್ನು ಅವಮಾನಿಸಿರುವುದನ್ನು ಖಂಡಿಸಿ ಇಲ್ಲಿನ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನೇತೃತ್ವದಲ್ಲಿ ತಾಲ್ಲೂಕಿನ ಬಿಲ್ಲವ ಸಂಘಟನೆಗಳು ಹಾಗೂ ಬಿಲ್ಲವ ಗ್ರಾಮ ಸಮಿತಿಗಳ ಸಹಯೋಗದೊಂದಿಗೆ ಜು.4ರಂದು ಪಟ್ಟಣದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಜು.4 ನಡೆಯಲಿದೆ.

ಬೆಳಿಗ್ಗೆ ಗಂಟೆ 10.30ಕ್ಕೆ ನಡೆಯುವ ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣವನ್ನು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾಡಲಿದ್ದಾರೆ. ಮಾಜಿ ಶಾಸಕ ಕೆ ವಸಂತ ಬಂಗೇರ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಭಾಗವಹಿಸುವರು ಎಂದು ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ಡಕ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT