ADVERTISEMENT

ಹಬ್ಬ ಆಚರಣೆಗೆ ಅಡ್ಡಿ ಪಡಿಸಿದರೆ ಹೋರಾಟ: ಸತೀಶ್ ಕುಂಪಲ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 14:30 IST
Last Updated 23 ಜುಲೈ 2024, 14:30 IST
ನಾಟೆಕಲ್‌ನಲ್ಲಿರುವ ಉಳ್ಳಾಲ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು
ನಾಟೆಕಲ್‌ನಲ್ಲಿರುವ ಉಳ್ಳಾಲ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು   

ಮುಡಿಪು: ಹಿಂದೂ ಧರ್ಮದ ಹಬ್ಬಗಳನ್ನು ಶಾಲಾ ಮೈದಾನಗಳಲ್ಲಿ ಆಚರಣೆ ಮಾಡದಂತೆ ಸರ್ಕಾರ ನೀಡಿರುವ ಸುತ್ತೋಲೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಬಿಜೆಪಿಯ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಮೊರ್ಚಾದ ಆಶ್ರಯದಲ್ಲಿ ಉಳ್ಳಾಲ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಮಂಗಳವಾರ ಭಜನೆ ಮೂಲಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.

ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ನಂದನ್ ಮಲ್ಯ, ಸಂತೋಷ್ ಕುಮಾರ್ ರೈ ಬೋಳಿಯಾರ್, ಟಿ.ರಾಜಾರಾಮ್ ಭಟ್, ಹೇಮಂತ್ ಶೆಟ್ಟಿ ದೇರಳಕಟ್ಟೆ, ದಯಾನಂದ ತೊಕ್ಕೊಟ್ಟು, ಸುಜಿತ್ ಮಾಡೂರು, ಯಶವಂತ ಅಮೀನ್, ದಿನೇಶ್ ಆಮ್ಟೂರ್, ಪದ್ಮನಾಭ ಗಟ್ಟಿ ಕೆಳಗಿನ ಮನೆ, ಮಾಧವಿ ಉಳ್ಳಾಲ್, ವರುಣ್ ತಲಪಾಡಿ ಭಾಗವಹಿಸಿದ್ದರು.

ADVERTISEMENT

ಮುರಳಿ ಕೊಣಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.