
ಪ್ರಜಾವಾಣಿ ವಾರ್ತೆ– ಪ್ರಜಾವಾಣಿ ಚಿತ್ರ
ಪುತ್ತೂರು: ವರ್ಷದ ಹಿಂದೆ ಮದ್ಯ ಸೇವಿಸಿ ಬೈಕ್ ಚಲಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಬೈಕ್ ಸವಾರ ಗಣೇಶ್ ನಾಯಕ್ ಎಂಬುವರಿಗೆ ಪುತ್ತೂರು ನ್ಯಾಯಾಲಯ ₹ 10ಸಾವಿರ ದಂಡ ವಿಧಿಸಿದೆ.
ಹೆಲ್ಮೆಟ್ ಧರಿಸದೆ ಗಣೇಶ್ ನಾಯಕ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕನ್ನು ತಡೆದು ತಪಾಸಣೆಗೊಳಪಡಿಸಿದಾಗ ಅವರು ಮದ್ಯ ಸೇವನೆ ಮಾಡಿರುವುದು ಕಂಡುಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪುತ್ತೂರಿನ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿರುವ ಪ್ರಕೃತಿ ಕಲ್ಯಾಣಪುರ ಅವರು ಪ್ರಕರಣದ ವಿಚಾರಣೆ ನಡೆಸಿ ಬೈಕ್ ಸವಾರನ ವಿರುದ್ಧದ ಆರೋಪ ಸಾಬೀತಾದ ಕಾರಣ ದಂಡ ವಿಧಿಸಿದ್ದಾರೆ. ಪ್ರಕರಣದ ಪರ ಸಹಾಯಕ ಸರ್ಕಾರಿ ಅಭಿಯೋಜಕಿ ಕವಿತಾ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.