
ವಂಚನೆ–ಪ್ರಾತಿನಿಧಿಕ ಚಿತ್ರ
ಪುತ್ತೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ಪುತ್ತೂರಿನ ತೆಂಕಿಲ ನಿವಾಸಿ ವಿನೋದ್ ಕೆ ಎಂಬಾತ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಆ.5ರಂದು ಸಾಲಕ್ಕಾಗಿ ಈತ ಸರವೊಂದನ್ನು ನೀಡಿದ್ದ. ಅದನ್ನು ಪರೀಕ್ಷಿಸಿ ಚಿನ್ನವೆಂದು ದೃಢಪಡಿಸಿದ ಬಳಿಕ ₹ 2 ಲಕ್ಷ ಸಾಲ ನೀಡಲಾಗಿತ್ತು. ಮರುದಿನ ನೆಕ್ಲೇಸ್ ಇರಿಸಿ ₹1.10 ಲಕ್ಷ ಸಾಲ ಪಡೆದಿದ್ದ. ಆ.26ರಂದು ಚೈನ್ ಹಾಗೂ ಬ್ರೇಸ್‌ಲೆಟ್ ಇರಿಸಿ ₹1.10 ಲಕ್ಷ ಸಾಲ ಪಡೆದಿದ್ದ. ಸೆ.4ರಂದು ₹2 ಲಕ್ಷ ಮತ್ತು ಬಡ್ಡಿ ₹ 2140 ಪಾವತಿಸಿದ್ದ ಆತ ಆ.5ರಂದು ಅಡವಿಟ್ಟ ಚಿನ್ನ ಬಿಡಿಸಿ, ಕೆಲವು ತಾಸುಗಳ ಬಳಿಕ ಅದೇ ಚಿನ್ನ ನೀಡಿ ₹ 2.10 ಲಕ್ಷ ಸಾಲ ಪಡೆದಿದ್ದ.
ನಕಲಿ ಚಿನ್ನಾಭರಣ ಅಡ ಇಟ್ಟು ವಂಚಿಸುತ್ತಿರುವ ಕುರಿತ ವರದಿಗಳನ್ನು ಕಂಡ ಸಂಘದವರು ವಿನೋದ್ ಅಡವಿಟ್ಟಿದ್ದ ಚಿನ್ನ ಸಂಸ್ಥೆಯೊಂದರಲ್ಲಿ ಪರಿಶೀಲಿಸಿದಾಗ 101.850 ಗ್ರಾಂ ತೂಕದ ಆಭರಣಗಳು ನಕಲಿ ಎಂಬುದು ತಿಳಿದಿತ್ತು. ಶಾಖೆಯ ಕಾರ್ಯನಿರ್ವಹಣಾಧಿಕಾರಿ ಸವಿತಾ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.