
ಪುತ್ತೂರು: ತಾಲ್ಲೂಕಿನ ಈಶ್ವರಮಂಗಲದ ಪಂಚಲಿಂಗೇಶ್ವರ ದೇವಳದ ಹೊರಾಂಗಣದ ಸುತ್ತು ಪೌಳಿಗೆ ಶಾಶ್ವತ ಚಪ್ಪರ ರಚನೆಗೆ ಅನುದಾನ ಒದಗಿಸಿಕೊಡುವಂತೆ ಆಗ್ರಹಿಸಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.
ದೇವಳದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ನೂಜಿಬೈಲು, ಪ್ರಮುಖರಾದ ಕರ್ನೂರುಗುತ್ತು ರತನ್ ಕುಮಾರ್ ನಾಯಕ್, ಮೇನಾಲ ರಾಮ್‌ಪ್ರಸಾದ್ ಆಳ್ವ, ವಿಕ್ರಮ್ ರೈ ಸಾಂತ್ಯ, ದೀಪಕ್ ಮುಂಡ್ಯ, ಚಿನ್ಮಯ್ ರೈ ನಡುಬೈಲು, ವಿನೋದ್‌ರಾಜ್ ರೈ ಅಣಿಲೆ, ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ ಅವರು ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದರು.
ದೇವಳದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಸಂಸದರ ಗಮನಕ್ಕೆ ತಂದ ಜೀರ್ಣೋದ್ಧಾರ ಸಮಿತಿಯ ಪ್ರಮುಖರು, ದೇವಳದ ಸುತ್ತು ಪೌಳಿಗೆ ಶಾಶ್ವತ ಚಪ್ಪರ ನಿರ್ಮಾಣ ಅಗತ್ಯವಿದ್ದು, ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಮನವಿಗೆ ಪೂರಕವಾಗಿ ಸ್ಪಂದನೆ ನೀಡಿದ್ದಾರೆ ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.