
ಪುತ್ತೂರು: ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಮೂಲಕ ಸವಣೂರು ಜಾತ್ರೋತ್ಸವ ಊರಿನ ಹಬ್ಬವಾಗಬೇಕು ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.
ಸವಣೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.7 ಮತ್ತು 8ರಂದು ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ ಪೂಜಾ ವಿಧಿವಿಧಾನವನ್ನು ನೆರವೇರಿಸಿದರು. ಅರ್ಚಕ ನಾರಾಯಣ ಬಡೆಕಿಲ್ಲಾಯ ಸಹಕರಿಸಿದರು.
ಸಂಧ್ಯಾ ವಿ.ಶೆಟ್ಟಿ ಸವಣೂರುಗುತ್ತು, ಬೆಳಿಯಪ್ಪ ಗೌಡ ಚೌಕಿಮಠ, ಶ್ರೀಧರ್ ಸುಣ್ಣಾಜೆ, ಗಂಗಾಧರ್ ಸುಣ್ಣಾಜೆ, ಚಂದ್ರಾವತಿ ಸುಣ್ಣಾಜೆ, ದಯಾನಂದ ಮಾಲೆತ್ತಾರು, ಉಮಾಪ್ರಸಾದ್ ರೈ ನಡುಬೈಲು, ಸತೀಶ್ ಬಲ್ಯಾಯ, ಜಯರಾಮ ರೈ ಮೂಡಂಬೈಲು, ಚೇತನ್ ಕುಮಾರ್ ಕೋಡಿಬೈಲು, ಉಮೇಶ್ ಸುಣ್ಣಾಜೆ, ಶಾರದಾ ಮಾಲೆತ್ತಾರು, ಮೀನಾಕ್ಷಿ ಶೆಟ್ಟಿ ಬರೆಮೇಲು, ಮಮತಾ ಜಿ.ಭಟ್, ಪದ್ಮಾವತಿ ಮಾಲೆತ್ತಾರು, ಗೀತಾ ಬಾರಿಕೆ, ಕಲಾವತಿ, ಕುಸುಮ, ಜಯಶ್ರೀ, ಪ್ರಶಾಂತ್, ಯಮುನಾ, ಜಯಂತಿ ಬಾರಿಕೆ, ಮೀನಾಕ್ಷಿ ವಿಶ್ವನಾಥ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.