ಮೂಲ್ಕಿ: ತಾಲ್ಲೂಕು ವ್ಯಾಪ್ತಿಯ ಕಿನ್ನಿಗೋಳಿ, ಪಡುಪಣಂಬೂರು, ಹಳೆಯಂಗಡಿಯಲ್ಲಿ ಭಾರಿ ಮಳೆ ಆಗಿದೆ. ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯಕಾಡು ವಿಜಯಪುರ ಕಾಲೊನಿಯ ಕಾಶಿಂಬಿಬಂದಗಿ ಸಾಬ್ ಎಂಬುವರ ಮನೆ ಕುಸಿದಿದೆ. ಮನೆಯಲ್ಲಿದ್ದ ಆರು ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಮೂಲ್ಕಿ ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ಏಳಿಂಜೆಯ ಶಾಂಭವಿ ನದಿ ಉಕ್ಕಿ ಹರಿದಿದ್ದು, ಸಂಕಲಕರಿಯ ಉಗ್ಗೆದಬೆಟ್ಟು ಸಂಪರ್ಕ ಹಾಗೂ ಪಟ್ಟೆ-ಏಳಿಂಜೆ ಸಂಪರ್ಕ ಕಡಿತಗೊಂಡಿದೆ. ಕೃಷಿ ಕೆಲಸಕ್ಕೆ ಬಂದಿದ್ದ ಶಿವಮೊಗ್ಗ ಮೂಲದ ಟ್ರಾಕ್ಟರ್ ಮಾಲೀಕ ಮಾಲತೇಶ್ ಅವರ ಕೊಠಡಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ದವಸ–ಧಾನ್ಯ, ಬಟ್ಟೆ ನೀರು ಪಾಲಾಗಿದೆ. ಪಟ್ಟೆ ಕ್ರಾಸ್‌ನಲ್ಲಿ ಕೋಳಿ ಅಂಗಡಿ ಮುಳುಗಡೆಯಾಗಿ ಕೋಳಿಗಳು ಸತ್ತು ನೀರಿನಲ್ಲಿ ತೇಲುತ್ತಿದ್ದವು.
ಮುಂಡ್ಕೂರು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ ಅವರ ಮನೆ, ಹಟ್ಟಿ ಮುಳುಗಡೆಯಾಗಿದೆ. ಅವರು ಸಂಗ್ರಹಿಸಿದ್ದ ತೆಂಗಿನಕಾಯಿ, ಗೊಬ್ಬರದ ಚೀಲಗಳು ನೀರು ಪಾಲಾಗಿವೆ. ಮುಂಡ್ಕೂರು ದೊಡ್ಡಮನೆಯ ಕಲ್ಲಾಡಿ ನಾಗಬನವೂ ಮುಳಗಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.