ಸುಬ್ರಹ್ಮಣ್ಯ: ಮಳೆಯಿಂದ ಹಾನಿಗೊಳಗಾದ ಹರಿಹರ ಪಲ್ಲತಡ್ಕ ಮತ್ತು ಕೊಲ್ಲಮೊಗ್ರ ಬೆಂಡೋಡಿ ಸೇತುವೆಯನ್ನು ಕೆಪಿಸಿಸಿ ವಕ್ತಾರ ಕೃಷ್ಣಪ್ಪ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ಬರೆ ಕುಸಿದು ಕಟ್ಟಡಕ್ಕೆ ಅಪಾಯ ಇರುವ ಸ್ಥಳವನ್ನೂ ವೀಕ್ಷಿಸಿದರು.
ಕಾಂಗ್ರೆಸ್ ಮುಖಂಡರಾದ ಮಣಿಕಂಠ ಕೊಳಗೆ, ದಿನೇಶ್ ಮಡ್ತಿಲ, ಸತೀಶ್ ಕೂಜುಗೋಡು, ಬೆಳ್ಯಪ್ಪ ಖಂಡಿಗೆ, ಯಶೋಧರ ಬಾಕಿಲ, ಪ್ರಶಾಂತ್ ಕೋಡಿಬೈಲು, ಶಿವರಾಮ ರೈ, ಪ್ರಜ್ವಲ್ ಕಜ್ಜೋಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.