ADVERTISEMENT

ಮಳೆ: ಯಂತ್ರೋಪಕರಣಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:02 IST
Last Updated 15 ಅಕ್ಟೋಬರ್ 2020, 5:02 IST
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು-ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ಕೃತಕ ನೆರೆಯಿಂದ ಶ್ರೀಹರಿ ಅಲ್ಯೂಮಿನಿಯಂ ಸಾಮಗ್ರಿ ತಯಾರಿಕಾ ಘಟಕಕ್ಕೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು-ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ಕೃತಕ ನೆರೆಯಿಂದ ಶ್ರೀಹರಿ ಅಲ್ಯೂಮಿನಿಯಂ ಸಾಮಗ್ರಿ ತಯಾರಿಕಾ ಘಟಕಕ್ಕೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ.   

ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು-ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಬುಧವಾರ ಕಾಣಿಸಿಕೊಂಡ ಕೃತಕ ನೆರೆಯಿಂದ ಶ್ರೀಹರಿ ಅಲ್ಯೂಮಿನಿಯಂ ಸಾಮಗ್ರಿ ತಯಾರಿಕಾ ಘಟಕಕ್ಕೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಮತ್ತು ವಿದ್ಯುತ್ ಸಾಮಗ್ರಿಗಳಿಗೆ ಹಾನಿಯಾಗಿದೆ.

ಸ್ಥಳೀಯ ಕಟ್ಟಡದ ಮಾಲೀಕರೊಬ್ಬರು ಹೆದ್ದಾರಿ ಬದಿ ತೋಡಿಗೆ ಅಕ್ರಮವಾಗಿ ಮಣ್ಣು ತುಂಬಿ ಸರ್ಕಾರಿ ಜಮೀನು ಅತಿಕ್ರಮಣಗೊಳಿಸಿದ ಪರಿಣಾಮ ಕೃತಕ ನೆರೆ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಯಂತ್ರೋಪಕರಣ ಹಾನಿಗೀಡಾದ ಸಂಸ್ಥೆಯ ಮಾಲೀಕ ನವೀನ್ ಕೋಟ್ಯಾನ್ ಅವರು ಹೆದ್ದಾರಿ ಇಲಾಖೆ ಮತ್ತು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಹೆದ್ದಾರಿ ಇಲಾಖೆ ಎಂಜಿನಿಯರ್ ಮಯಾಂಕ್ ಮಿಶ್ರಾ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರಸ್ತೆ ಅತಿಕ್ರಮಣ ಬಗ್ಗೆ ಪರಿಶೀಲಿಸಿದರು. ಹಿಟಾಚಿ ಮೂಲಕ ಮಣ್ಣು ತೆರವುಗೊಳಿಸಲಾಯಿತು.

ಕಾರಿಂಜ ಕ್ಷೇತ್ರದಲ್ಲಿ ಶಿವಾಲಯ ಬಳಿ ಹಳೆಯ ತಡೆಗೋಡೆ ಕುಸಿದು ಅಪಾರ ಹಾನಿಯಾಗಿದೆ.ಹಗ್ಗದಿಂದ ತಾತ್ಕಾಲಿಕ ಬೇಲಿ ನಿರ್ಮಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.