
ಬೆಳ್ತಂಗಡಿ: ತಾಲ್ಲೂಕಿನ ಸುಲ್ಕೇರಿ ಮೊಗ್ರು ಗ್ರಾಮದ ಪಂಜಾಲ, ಮಾಳಿಗೆ ಬೈಲಿನ 15 ಆದಿವಾಸಿ ಕುಟುಂಬ ಸೇರಿ 28 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಲಭಿಸಿದೆ.
ಆದಿವಾಸಿಗಳು ನೆಲೆಸಿರುವ ಅರಣ್ಯ ಪ್ರದೇಶದ ವಸತಿ ಪ್ರದೇಶಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರಿಂದ ಅರಣ್ಯ, ಜೀವಿಶಾಸ್ತ್ರ ಮತ್ತ ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ವಿದ್ಯುತ್ ಮಾರ್ಗ ಅಳವಡಿಕೆಗೆ ಅರಣ್ಯ ಭೂಮಿ ಪರಿವರ್ತನೆಗಾಗಿ ಪರಿವೇಶ್ ಪೋರ್ಟಲ್‌ನಲ್ಲಿ ಅರ್ಜಿ ಹಾಕಿಸಿ, ಅನುಮತಿ ಪಡೆಯಲು ಕ್ರಮ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು.
ಈ ಬಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಅನುಮತಿಗಾಗಿ ಮುತುವರ್ಜಿ ಸಹಕರಿಸಿದಕ್ಕಾಗಿ ಸುಲ್ಕೇರಿ ಮೊಗ್ರು ಗ್ರಾಮದ ಪಂಜಾಲ, ಮಾಳಿಗೆ ಬೈಲಿನ ನಿವಾಸಿಗಳು ರಕ್ಷಿತ್ ಶಿವರಾಂ ಅವರಿಗೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶೇಖರ್ ಕುಕ್ಕೆಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸತೀಶ್ ಮಿತ್ತಮರ್, ಮಾಜಿ ಸದಸ್ಯ ಸತೀಶ್ ಎಸ್.ಎಂ. ಅವರಿಗೆ ಮಾಳಿಗೆ ಬೈಲಿನ ತುಂಗಪ್ಪ ಮಲೆಕುಡಿಯ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಪಂಚಾಯಿತಿ ಸದಸ್ಯರಾದ ಪ್ರಶಾಂತ್ ವೇಗಸ್, ಕೆಡಿಪಿ ಸದಸ್ಯ ಸುನಿಲ್ ಜೈನ್, ಶಿರ್ಲಾಲು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಚಿದಾನಂದ ಇಂಚರ, ತಾಲ್ಲೂಕು ಪಂಚಾಯಿತಿ ಸದಸ್ಯೆ ವಿನುಷ ಪ್ರಕಾಶ್, ಪ್ರಮುಖರಾದ ಪ್ರಸಾದ್ ಪಿಂಟೊ, ಕುಶಾಲಪ್ಪ ಗೌಡ, ಕೃಷ್ಣಪ್ಪ ಪೂಜಾರಿ ಶಿರ್ಲಾಲ್, ನಾರಾಯಣ ಪೂಜಾರಿ, ಸುಂದರ ಪೂಜಾರಿ ಕೆಡೆಲು, ಸಂತೋಷ್ ಎಂ.ಕೆ.ಕೇಡೆಲು, ಆನಂದ ಎಂ.ಕೆ., ಜಯಂತ ಎಂ.ಕೆ., ಸುಭಾಷ್ ಎಂ.ಕೆ., ಪುರಂದರ, ಸದಾನಂದ ಆಚಾರ್ಯ, ಸದಾನಂದ ಪೂಜಾರಿ ಮಾಲಿಗೆ, ಹೆರಾಲ್ಡ್ ಪಿಂಟೊ, ಅಶೋಕ್ ಸುವರ್ಣ, ವೆಂಕಪ್ಪ ಮಲೆಕುಡಿಯ, ಶಿವಪ್ಪ ಮಲೆಕುಡಿಯ, ಸದಾನಂದ ಮಲೆಕುಡಿಯ, ಸುರೇಶ್ ಪೂಜಾರಿ, ವಿಶ್ವನಾಥ್ ಪೂಜಾರಿ, ಲೋಕಯ್ಯ ಪೂಜಾರಿ, ಪ್ರವೀಣ್ ಎಂಕೆ., ಅಮ್ಮಾಜಿ ಎಂ.ಕೆ., ಬಾಬು ಪೂಜಾರಿ ಪಂಜಲ, ಧರ್ಮಪ್ಪ ಪೂಜಾರಿ ದೋರಿಂಜ, ವೀರೇಂದ್ರ ಕುಮಾರ್ ಜೈನ್ ನಾಗರ, ಪುಷ್ಪರಾಜ್ ನಾವುರ, ರವಿ ಬಂಗೇರ ಪಿಲ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.