
ಪ್ರಜಾವಾಣಿ ವಾರ್ತೆ
ಮಂಗಳೂರು: ಬೆಂಗಳೂರಿನ ಪ್ರಸಿದ್ಧ ಲೇಖಕಿಯಾದ ರಮ್ಯಾ. ಎಸ್ ಅವರ ವರ್ಣತಂತು ಕಾದಂಬರಿ, ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಕರಣ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಉಪೇಂದ್ರ ಸೋಮಯಾಜಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ತೀರ್ಪುಗಾರರಾಗಿದ್ದ ಬೆಳಗೋಡು ರಮೇಶ್ ಭಟ್ ಅವರು ಪುಸ್ತಕದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಭಾಸ್ಕರ್ ಆಚಾರ್ಯ, ಡಾ. ಸಬಿ ತಾ ಆಚಾರ್ಯ, ನೀಲಾವರ ಸುರೇಂದ್ರ ಅಡಿಗ, ಮತ್ತು ಶೇಷ ನಾರಾಯಣ ಚಡಗರು ಹಾಗೂ ಡಾ. ದಯಾನಂದ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪಿ. ಮಂಜುನಾಥ್ ಉಪಾಧ್ಯ ಅವರು ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.